ಸಿಇಟಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ರಿಪ್ಪನ್‌ಪೇಟೆಯ ಶಂಕರ್ ಪಟೇಲ್|CET

ರಿಪ್ಪನ್‌ಪೇಟೆ : ಸಿಇಟಿ ಪರೀಕ್ಷೆಯಲ್ಲಿ ಪಟ್ಟಣದ ಸಾಗರ ರಸ್ತೆಯ ಯುವಕ ಶಂಕರ್ ಪಟೇಲ್ 976 ನೇ ರ‍್ಯಾಂಕ್‌ ಉತ್ತಮ ಸಾಧನೆಗೈದಿದ್ದಾನೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದ್ದು ಕಾರ್ಕಳದ ಜ್ಞಾನ ಸುಧಾ ಕಾಲೇಜಿನ ಶಂಕರ್ ಪಟೇಲ್ 976ನೇ ರ‍್ಯಾಂಕ್‌ ಪಡೆದು ಉತ್ತಮ ಸಾಧನೆಗೈದಿದ್ದಾರೆ.




ಪಟ್ಟಣದ ಉದ್ಯಮಿ ಕೆ ಎಂ ಉಮೇಶ್ ಮತ್ತು ರಾಜೇಶ್ವರಿ ದಂಪತಿಗಳ ಪುತ್ರ ಶಂಕರ್ ಪಟೇಲ್ ಕಾರ್ಕಳದ ಜ್ಞಾನ ಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದನು.ಪಿಯುಸಿ ಪರೀಕ್ಷೆಯಲ್ಲಿ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದನು.

ಸಿಇಟಿ ಪರೀಕ್ಷೆಯಲ್ಲಿ ಅತ್ಯದ್ಭುತ ಸಾಧನೆಗೈದ ರಿಪ್ಪನ್‌ಪೇಟೆಯ ಯುವ ಪ್ರತಿಭೆ ಶಂಕರ್ ಪಟೇಲ್ ರವರಿಗೆ ಕೊಳವಳ್ಳಿ ಕೋಮಲಾಕ್ಷಮ್ಮ ಮುರಿಗಪ್ಪ ಗೌಡ ಮತ್ತು ಗೌರಿ ಪಟೇಲ್ ಶುಭ ಕೋರಿದ್ದಾರೆ.




ಶಂಕರ್ ಪಟೇಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆಗೈದು ಯಸಸ್ಸಿನ ಉತ್ತುಂಗಕ್ಕೇರಲಿ ಎಂದು ಪೋಸ್ಟ್ ಮ್ಯಾನ್ ಸುದ್ದಿ ಬಳಗ ಆಶಿಸುತ್ತದೆ.





Leave a Reply

Your email address will not be published. Required fields are marked *