ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ|accident

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ

ಮಾಸ್ತಿಕಟ್ಟೆ : ಇಲ್ಲಿನ ಸಮೀಪದ ಹುಲಿಕಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ.

ಹೊಸನಗರ ಕಡೆಯಿಂದ ಮಂಗಳೂರಿಗೆ ಸಿಮೆಂಟ್ ತುಂಬಿಕೊಂಡು ತೆರಳುತಿದ್ದ 12 ಚಕ್ರದ ಲಾರಿ (KA 19 AB 0933) ಹುಲಿಕಲ್ ಗ್ರಾಮದ ಬಾಬುರಾವ್ ಎಂಬುವವರ ಮನೆಯ ಸಮೀಪದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕದಲ್ಲಿ ಪಲ್ಟಿಯಾಗಿ ಉರುಳಿ ಬಿದ್ದಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರುವುದಿಲ್ಲ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಪ್ಪಿದ ಭಾರಿ ಅನಾಹುತ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳನ್ನು ನಿಷೇಧಿಸಿರುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.  ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರುವ ಸ್ಥಳದ ಅಕ್ಕಪಕ್ಕದಲ್ಲಿ ಹಲವು ಮನೆಗಳಿದ್ದು ಭಾರಿ ಅನಾಹುತ ತಪ್ಪಿದೆ.ಘಟನೆ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿ ಈ ಘಟನೆ ನಡೆದಿದ್ದರೆ ಹೆಚ್ಚಿನ ಅನಾಹುತ ನಡೆಯುತಿತ್ತು ಎಂದು ಹೇಳಲಾಗುತ್ತಿದೆ.

ಮಾಸ್ತಿಕಟ್ಟೆಯಿಂದ ಬಾಳೆಬರೇ ಘಾಟ್ ವರೆಗೆ ರಸೆಯ ಎರಡು ಬದಿಗಳಲ್ಲಿ ದೊಡ್ಡ ದೊಡ್ಡ ಕಂದಕಗಳಿದ್ದು ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಇಲ್ಲಿ ಪಾಲಿಸಿರುವುದಿಲ್ಲ,ರಸ್ತೆಯ ಸುರಕ್ಷತಾ ಫಲಕವನ್ನು ಸಹ ಅಳವಡಿಸದೇ ಇರುವುದರಿಂದ ಈ ತರಹದ ಅಪಘಾತಗಳು ನಡೆಯುತ್ತಿದೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡ ವಾಸಪ್ಪ ಮಾಸ್ತಿಕಟ್ಟೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *