ಸಿಡಿಲಿನ ಆರ್ಭಟಕ್ಕೆ 8 ಕುರಿಗಳು ಬಲಿ : ಪರಿಹಾರಕ್ಕೆ ಆಗ್ರಹ | Eight sheep belonging to Basappa died after being struck by lightning during heavy rain at Kanahalli in Ulavi Hobli, Soraba taluk, Shivamogga district. The family has sought government compensation.
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ ಗ್ರಾಮದಲ್ಲಿ ಭಾನುವಾರ ಭಾರೀ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಎಂಟು ಕುರಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಕಾನಹಳ್ಳಿ ಗ್ರಾಮದ ಬಸಪ್ಪ ಎಂಬುವರಿಗೆ ಸೇರಿದ ಕುರಿಗಳು ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಮಳೆಯ ಸಂದರ್ಭದಲ್ಲಿ ಕುರಿಗಳು ಒಂದೆಡೆ ಸೇರಿದ್ದ ವೇಳೆ ಸಿಡಿಲು ಬಡಿದಿದ್ದು, ಎಂಟು ಕುರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ.
ಕುರಿಗಳನ್ನೇ ಜೀವನಾಧಾರವಾಗಿಸಿಕೊಂಡಿದ್ದ ಬಸಪ್ಪ ಕುಟುಂಬಕ್ಕೆ ಈ ಘಟನೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಿದೆ. ಏಕಾಏಕಿ ಎಂಟು ಕುರಿಗಳನ್ನು ಕಳೆದುಕೊಂಡಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಕುರಿಗಳ ಸಾವಿನಿಂದ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಬಸಪ್ಪ ಕುಟುಂಬ ಮನವಿ ಮಾಡಿದೆ. ಸರ್ಕಾರ ತಕ್ಷಣ ನೆರವು ನೀಡಬೇಕು ಎಂಬುದು ಕುರಿಗಾಹಿ ಕುಟುಂಬದ ಆಗ್ರಹವಾಗಿದೆ.
