w
Headlines
Home » ಗನ್, ಡ್ರ್ಯಾಗರ್ ಹಿಡಿದು Instagramನಲ್ಲಿ ವಿಡಿಯೋ ಪೋಸ್ಟ್; ಯುವಕನ ವಿರುದ್ಧ ಪ್ರಕರಣ ದಾಖಲು

ಗನ್, ಡ್ರ್ಯಾಗರ್ ಹಿಡಿದು Instagramನಲ್ಲಿ ವಿಡಿಯೋ ಪೋಸ್ಟ್; ಯುವಕನ ವಿರುದ್ಧ ಪ್ರಕರಣ ದಾಖಲು

Screenshot 2026 10 03 15 40 40 697 com.openai.chatgpt edit

ಗನ್, ಡ್ರ್ಯಾಗರ್ ಹಿಡಿದು Instagramನಲ್ಲಿ ವಿಡಿಯೋ ಪೋಸ್ಟ್; ಯುವಕನ ವಿರುದ್ಧ ಪ್ರಕರಣ ದಾಖಲು | Shivamogga rural police have registered a case against a man for allegedly posting an Instagram video holding a gun and dagger, creating fear among the public.

ಶಿವಮೊಗ್ಗ: ಗನ್ ಹಾಗೂ ಡ್ರ್ಯಾಗರ್ ಹಿಡಿದುಕೊಂಡು ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಯುವಕನೊಬ್ಬನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 23ರಂದು ಶಿವಮೊಗ್ಗ ನಗರದ ರಾಗಿಗುಡ್ಡ ಸರ್ಕಲ್‌ನಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗನ್ ಮತ್ತು ಡ್ರ್ಯಾಗರ್ ಹಿಡಿದುಕೊಂಡಿರುವ ವಿಡಿಯೋ ಹರಿದಾಡುತ್ತಿರುವ ಕುರಿತು ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಹಾಗೂ ಸಂಬಂಧಿಸಿದ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದ್ದಾರೆ.

ವಿಡಿಯೋದಲ್ಲಿ ಯುವಕನೊಬ್ಬ ಒಂದು ಕೈಯಲ್ಲಿ ಗನ್ ಹಾಗೂ ಮತ್ತೊಂದು ಕೈಯಲ್ಲಿ ಡ್ರ್ಯಾಗರ್ ಹಿಡಿದುಕೊಂಡು ಸುಮಾರು 11 ಸೆಕೆಂಡ್‌ಗಳ ಕಾಲ ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಂ ಖಾತೆ ಹಾಗೂ ವಿಡಿಯೋವನ್ನು ಪರಿಶೀಲಿಸಿದ ಪೊಲೀಸರು, ಸುಹೇಲ್ ಮಾಮ ಎಂಬಾತನ ವಿರುದ್ಧ ಸ್ವಯಂಪ್ರೇರಿತವಾಗಿ (ಸುಮುಟೋ) ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959ರ ಕಲಂ 25(1)(a) ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.