ವೈದ್ಯ ವೃತ್ತಿಯಷ್ಟೇ ಫಾರ್ಮಸಿಸ್ಟ್ ವೃತ್ತಿಯೂ ಮಹತ್ವದ್ದು: ಗಣೇಶ್ ಎಸ್. ರಾವ್ | Shivamogga District Pharmacists Association celebrated World Pharmacists Day 2026 at Jeevana Saanje Old Age Home in Gadikoppa, highlighting the importance and social responsibility of the pharmacist profession.
ರಿಪ್ಪನ್‌ಪೇಟೆ: ಫಾರ್ಮಸಿಸ್ಟ್ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿಯ ವೃತ್ತಿಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಫಾರ್ಮಸಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಎಸ್. ರಾವ್ ಹೇಳಿದರು.
ಗಾಡಿಕೊಪ್ಪದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಫಾರ್ಮಸಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ–2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಇಂದಿನ ಡಿ.ಫಾರ್ಮ್ ಪದವೀಧರರು ಔಷಧಗಳ ಕುರಿತು ವೈದ್ಯರಿಗೂ ಅಗತ್ಯ ಮಾಹಿತಿಯನ್ನು ನೀಡುವಷ್ಟು ಪರಿಣತಿ ಹೊಂದಿದ್ದಾರೆ. ಫಾರ್ಮಸಿಸ್ಟ್‌ಗಳು ನಿರಂತರವಾಗಿ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವ ಮೂಲಕ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಗಣೇಶ್ ಎಸ್. ರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎನ್. ಶ್ರೀಹರ್ಷ, ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್. ನಾರಾಯಣಮೂರ್ತಿ, ಎಡಿಸಿ ಡಾ. ವೀರೇಶ್‌ಬಾಬು ಎಸ್.ವಿ., ವಿಶಾಲಾಕ್ಷಿ, ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಎಂ. ಹಾಲಪ್ಪ, ಜಿಲ್ಲಾ ಫಾರ್ಮಸಿಸ್ಟ್ ಅಸೋಸಿಯೇಷನ್ ಗೌರವಾಧ್ಯಕ್ಷ ವಿವೇಕಾನಂದ ನಾಯಕ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಬಿ.ಆರ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
32 ವರ್ಷಗಳ ಸೇವೆಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕಳೆದ 32 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಗ್ರಾಹಕರಿಗೆ ಫಾರ್ಮಸಿ ಸೇವೆ ನೀಡುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿರುವ ರಿಪ್ಪನ್ ಪೇಟೆಯ ಹೆಚ್.ಎಸ್. ಸತೀಶ್ ಹಾಗೂ ಅವರ ಪತ್ನಿಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.