ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಆರೋಪಿಗಳು ಪರಾರಿ ,ಜಾನುವಾರು ರಕ್ಷಣೆ
ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನ ಬೆಳಕೋಡು ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ನಡೆಸುತಿದ್ದ ವಾಹನ ಸಮೇತ ಜಾನುವಾರನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಳಕೋಡು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತಿದ್ದ ಅಶೋಕ್ ಲೈಲ್ಯಾಂಡ್ ಲಗೇಜ್ ಆಟೋವನ್ನು ಅನುಮಾನದಿಂದ ಸ್ಥಳೀಯರು ತಡೆದು ವಿಚಾರಿಸಲು ಹೋದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿತ್ತು.
ಅಶೋಕ್ ಲೈಲ್ಯಾಂಡ್ ಲಗೇಜ್ ಆಟೋ(ka-15-9389) ಹಾಗೂ ಬೆಂಗಾವಲಾಗಿದ್ದ ಒಂದು ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.