w
Headlines
Home » ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

Screenshot 2026 09 18 17 00 27 397 com.openai.chatgpt edit

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

Revenue officials removed a fence allegedly erected on government land reserved for an RI residence near Baruve Government Higher Primary School. Dispute over ownership documents and 9/11 records sparks questions.

ರಿಪ್ಪನ್‌ಪೇಟೆ: ನಾಡಕಚೇರಿ ಹಿಂಭಾಗದ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ, ರೆವಿನ್ಯೂ ಇನ್ಸ್‌ಪೆಕ್ಟರ್‌ ವಸತಿ ನಿವೇಶನಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಜಾಗಕ್ಕೆ ಖಾಸಗಿ ವ್ಯಕ್ತಿಗಳು ಬೇಲಿ ಹಾಕಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ನಾಡಕಚೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್‌ ಸೈಯದ್‌ ಅಫ್ರೋಜ್‌ ನೇತೃತ್ವದಲ್ಲಿ ಸಿಬ್ಬಂದಿ ಬೇಲಿ ತೆರವುಗೊಳಿಸಿದ ಘಟನೆ ನಡೆದಿದೆ.

ಬೇಲಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಹಾಗೂ ಜಾಗದ ಹಕ್ಕುಪತ್ರ ಮತ್ತು 9/11 ದಾಖಲೆ ತಮ್ಮಲ್ಲಿವೆ ಎಂದು ಹೇಳಿಕೊಂಡ ಉಮೇಶ್‌ ಎಂಬುವವರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಆರ್‌ಐ ಸೈಯದ್‌ ಅಫ್ರೋಜ್‌, ಜಾಗವು ಪಹಣಿ ದಾಖಲೆಗಳಲ್ಲಿ ಕಂದಾಯ ಇಲಾಖೆಗೆ ಮಂಜೂರಾಗಿದ್ದು, ಈ ಹಿಂದೆ 2018ರಲ್ಲಿಯೂ ತೆರವುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ನಿಮ್ಮ ಬಳಿ ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ನ್ಯಾಯಾಲಯದ ಮೂಲಕ ಆದೇಶ ಪಡೆದು ಬೇಲಿ ನಿರ್ಮಿಸಬೇಕು. ಏಕಾಏಕಿ ಸರ್ಕಾರಿ ಜಾಗದಲ್ಲಿ ಬೇಲಿ ನಿರ್ಮಿಸುವುದು ಸರಿಯಲ್ಲ ಎಂದು ಹೇಳಿ ಹಾಕಲಾಗಿದ್ದ ಬೇಲಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಮೇಶ್‌, ಸದರಿ ಜಾಗಕ್ಕೆ ಸರ್ಕಾರದಿಂದ ಹಕ್ಕುಪತ್ರ ದೊರೆತಿದ್ದು, ತಮ್ಮ ಬಳಿ ಅಗತ್ಯ ದಾಖಲೆಗಳಿವೆ. ಅಲ್ಲದೆ, ಗ್ರಾಮ ಪಂಚಾಯಿತಿಯಿಂದ ನೀಡಲಾಗಿರುವ ಅಧಿಕೃತ 9/11 ದಾಖಲೆಯೂ ತಮ್ಮಲ್ಲಿದೆ. ಹೀಗಾಗಿ ಜಾಗದ ಮೇಲಿನ ಹಕ್ಕು ತಮ್ಮದೇ ಎಂದು ವಾದಿಸಿದ್ದಾರೆ. ಅಂತಿಮವಾಗಿ ಜಾಗದ ಹಕ್ಕು ಸಂಬಂಧ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಗೂ ನಾಡಕಛೇರಿಯ ಸಿಬ್ಬಂದಿಗಳು ಇದ್ದರು.

9/11 ಖಾತಾ ಮ್ಯಾಜಿಕ್: ಅಸಿಂಧು ಜಾಗಕ್ಕೂ ಮಂಜೂರಾಯ್ತು ದಾಖಲೆ! ಕಾಂಚಾಣದ ಮಹಿಮೆಯೋ, ‘ದಾನಶೂರ’ರ ಕೃಪೆಯೋ?

​ನಮೂನೆ 9 ಮತ್ತು 11 ಆಸ್ತಿಯ ಕಾನೂನುಬದ್ಧತೆಯನ್ನು ಸಾರುವ ಪವಿತ್ರ ದಾಖಲೆಗಳಂತೆ! ಆದರೆ, 2018ರಲ್ಲೇ ಹಕ್ಕುಪತ್ರ ಅಸಿಂಧು ಎಂದು ಗಲಾಟೆಯಾಗಿ ಬೇಲಿ ತೆರವುಗೊಳಿಸಿದ್ದ ಜಾಗಕ್ಕೆ ರಾತ್ರೋರಾತ್ರಿ 9/11 ಖಾತಾ ಸೃಷ್ಟಿಯಾಗುವ ‘ಪವಾಡ’ ನಮ್ಮ ವ್ಯವಸ್ಥೆಯಲ್ಲಿ ಮಾತ್ರ ನಡೆಯಲು ಸಾಧ್ಯ! ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯ ಸದಸ್ಯರಿಗೇ ಕಿಂಚಿತ್ತೂ ಸುಳಿವು ನೀಡದೆ ದಾಖಲೆ ಸೃಷ್ಟಿಸಿದ ಆ ಪಿಡಿಒ (PDO) ಅವರ ‘ಕಾರ್ಯದಕ್ಷತೆ’ಗೆ ಮೆಚ್ಚಿ ಬಹುಮಾನ ನೀಡಲೇಬೇಕು, ಅಲ್ಲವೇ?

​ಇದು ಅಪ್ಪಟ ಭ್ರಷ್ಟಾಚಾರದ ಕಮಟು. ಯಾವ ಅಧ್ಯಕ್ಷರು , ಸದಸ್ಯರ ಆಶೀರ್ವಾದ ಮತ್ತು ಯಾವ ಪಿಡಿಒ ಸಾಹಸದಿಂದ ಈ ಅಕ್ರಮ ಖಾತಾ ಜನಿಸಿದೆ ಎಂಬುದು ಬೇರು ಮಟ್ಟದಿಂದ ತನಿಖೆಯಾಗಲೇಬೇಕಾದ ವಿಚಾರ. ಟೇಬಲ್ ಕೆಳಗಿನ ಕಾಂಚಾಣದ ಸದ್ದಿಗೆ ನಿಯಮಗಳೆಲ್ಲವೂ ಇಲ್ಲಿ ಮೂಕವಿಸ್ಮಿತವಾಗಿವೆ!

ಈ ಪ್ರಕರಣ ಕೇವಲ ಒಂದು ಸ್ಯಾಂಪಲ್ ಅಷ್ಟೇ. ಆ ನಿರ್ದಿಷ್ಟ ಅಧ್ಯಕ್ಷರು ಹಾಗೂ ಪಿಡಿಒಗಳ ‘ಸುವರ್ಣ ಯುಗ’ದಲ್ಲಿ ಇಂತಹ ಇನ್ನೆಷ್ಟು ನಕಲಿ ಖಾತೆಗಳು ಸೃಷ್ಟಿಯಾಗಿ, ಕಾಂಚಾಣದ ಹೊಳೆಯೇ ಹರಿದಿದೆಯೋ ಎಂಬ ಭಾರಿ ಸಂಶಯ ಕಾಡುತ್ತಿದೆ. ಈ ನಿಗೂಢ ವ್ಯವಹಾರದ ಹಿಂದಿರುವ ಕಳ್ಳ ಮಾರ್ಗಗಳನ್ನು ಭೇದಿಸಲು ಈಗ ಉನ್ನತ ಮಟ್ಟದ ಸಮಗ್ರ ತನಿಖೆಯೊಂದೇ ಉಳಿದಿರುವ ಅಸ್ತ್ರ. ಭ್ರಷ್ಟರ ಬಣ್ಣ ಬಯಲಾಗಬೇಕಾದರೆ ಫೈಲುಗಳೆಲ್ಲವೂ ತನಿಖಾಧಿಕಾರಿಗಳ ಕೈಸೇರಲೇಬೇಕು ಅಲ್ಲವೇ..!!?

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.