ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ
Ripponpete Government Higher Primary Boys School, established in 1926, forms a centenary committee with Niroop Kumar as president and Suresh Singh M as working president to commemorate its 100-year educational journey.
ರಿಪ್ಪನ್‌ಪೇಟೆ: 1926ರಲ್ಲಿ ಸ್ಥಾಪನೆಯಾಗಿ ಗ್ರಾಮೀಣ ಭಾಗದ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿರುವ ರಿಪ್ಪನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಇದೀಗ ಶತಮಾನೋತ್ಸವ ಸಂಭ್ರಮಕ್ಕೆ ಸಜ್ಜಾಗುತ್ತಿದೆ.
ಶಾಲೆಯ 100 ವರ್ಷಗಳ ಐತಿಹಾಸಿಕ ಪಯಣವನ್ನು ಸ್ಮರಣೀಯವಾಗಿ ಆಚರಿಸುವ ಉದ್ದೇಶದಿಂದ ಪಟ್ಟಣದ ತಿಲಕ್ ಮಂಟಪದಲ್ಲಿ ನಡೆದ ಸಭೆಯಲ್ಲಿ ಶತಮಾನೋತ್ಸವ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು. ನಿರೂಪ್ ಕುಮಾರ್ ಅವರನ್ನು ಅಧ್ಯಕ್ಷರಾಗಿ ಹಾಗೂ ಸುರೇಶ್ ಸಿಂಗ್ ಎಂ. ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು
ಗೌರವಾಧ್ಯಕ್ಷರು: ಆರ್.ಎ. ಚಾಬುಸಾಬ್
ಅಧ್ಯಕ್ಷರು: ನಿರೂಪ್ ಕುಮಾರ್
ಕಾರ್ಯಾಧ್ಯಕ್ಷರು: ಸುರೇಶ್ ಸಿಂಗ್ ಎಂ.
ಪ್ರಧಾನ ಕಾರ್ಯದರ್ಶಿಗಳು: ಸುಧೀಂದ್ರ ಪೂಜಾರಿ, ಆಸೀಫ್ ಭಾಷಾ
ಉಪಾಧ್ಯಕ್ಷರು: ಹಬೀಬ್ ಸಾಬ್, ಆರ್.ಎ. ಮಂಜುನಾಥ್, ಸೋಮಶೇಖರ್ ಜೋಗಿ, ಪ್ರೇಮ್ ನಾಥ್, ಉಮೇಶ್
ಸಂಘಟನಾ ಕಾರ್ಯದರ್ಶಿಗಳು: ರಫಿ ರಿಪ್ಪನ್‌ಪೇಟೆ, ಸೆಬಾಸ್ಟಿಯನ್ ಮ್ಯಾಥ್ಯುಸ್, ಹಸನಬ್ಬ ಬ್ಯಾರಿ, ಕೀರ್ತಿರಾಜ್ ಗೌಡ, ದೇವರಾಜ್ ಗೌಡ, ಶೀಲಾ ಆರ್.ಡಿ., ಪ್ರವೀಣ್ ಆಚಾರ್, ಸುಧಾಕರ್
ಮಾಧ್ಯಮ ಕಾರ್ಯದರ್ಶಿಗಳು: ಚಿದಾನಂದ್, ಕಾರ್ತಿಕ್
ನಿರ್ದೇಶಕರು: ಶಿವಪ್ಪಗೌಡ, ಪರಶುರಾಮ್ ಕೆರೆಹಳ್ಳಿ, ಉಮೇಶ್ ಆರ್.ವಿ., ಶಿವರಾಜ್ ಪ್ರಭು, ರವಿಚಂದ್ರ, ಈಶ್ವರ್ ಶೆಟ್ಟಿ, ಮಂಜಪ್ಪ, ಈಶ್ವರ್ ಮಳಕೊಪ್ಪ, ಸುದೇಶ್, ವಿನಾಯಕ್ ಕೆರೆಹಳ್ಳಿ, ಮುರುಳಿ ಕೆ.ವಿ., ಜಗದೀಶ್ ನೇಮಣ್ಣ, ಸಾಯಿನಾಥ್ ಭಂಡಾರಿ, ಭೀಮರಾಜ್, ಹೇಮಾವತಿ, ಶ್ರೀಧರ್ ಚಿಗುರು.
ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ನಿರ್ಧಾರ
ಶಾಲೆಯ ಶತಮಾನೋತ್ಸವದ ಅಂಗವಾಗಿ ಗುರುವಾರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಹಳೆಯ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಸಭೆಯಲ್ಲಿ ಕಳೆದ 100 ವರ್ಷಗಳಲ್ಲಿ ಶಾಲೆಯಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಉನ್ನತ ಅಧಿಕಾರಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ಕುರಿತು ಸಲಹೆಗಳನ್ನು ಪಡೆಯಲಾಯಿತು.
ಶತಮಾನೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಕ್ರಮಗಳ ಸಮಗ್ರ ರೂಪುರೇಷೆ ಸಿದ್ಧಪಡಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮಗಳ ದಿನಾಂಕ ಹಾಗೂ ರೂಪುರೇಷೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.