ಶಿವಮೊಗ್ಗ : ಸೋಗಾನೆಯಲ್ಲಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಡಿಗೋ ಎಟಿಆರ್ ವಿಮಾನ ಬಂದಿಳಿದಿದೆ.
ಇಂಡಿಗೋ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ,ಶಾಸಕರಾದ ಬೇಳೂರು ಗೋಪಾಲಕೃಷ್ಣ,ಚನ್ನಬಸಪ್ಪ ,ಬಿ ವೈ ವಿಜಯೋಂದ್ರ, ಆರಗ ಜ್ಞಾನೇಂದ್ರ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ. ಸೇರಿ ಒಟ್ಟು 72 ಮಂದಿ ಆಗಮಿಸಿದರು.
ಇಂಡಿಗೋ ಸಂಸ್ಥೆಯ ಎಟಿಎಅರ್ ವಿಮಾನ ಬೆಳಗ್ಗೆ 11 ಗಂಟೆ ಹೊತ್ತಿಗೆ ಲ್ಯಾಂಡ್ ಆಯಿತು. ಜನರನ್ನು ಹೊತ್ತು ಬಂದಿದ್ದ ಮೊದಲ ವಿಮಾನ ಶಿವಮೊಗ್ಗ ನಿಲ್ದಾಣದ ರನ್ ವೇ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಯಿತು. ರನ್ ವೇ ಬಳಿ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು.
ಮೊದಲ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ವಾಗತಿಸಿದರು.
ನಂತರ ವಿಮಾನ ನಿಲ್ದಾಣದ ಲಾಂಜ್ ನಲ್ಲಿ ಸರಳ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣದ ವೆಬ್ಸೈಟ್ ಗೆ ಸಚಿವ ಎಂ.ಬಿ.ಪಾಟೀಲ ಚಾಲನೆ ನೀಡಿದರು. ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರ ಪರವಾಗಿ ಇಬ್ಬರನ್ನು ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.