w
Headlines
Home » ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ|rpet

ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ|rpet

ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ – 
ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ 56 ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವ  ಮತ್ತು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷಣ ಬಳ್ಳಾರಿ ವಿವರಿಸಿದರು.

ಸೆಪ್ಟಂಬರ್ 18 ರಂದು ಸೋಮವಾರ 12.30 ಕ್ಕೆ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಪೂಜೆ ಮತ್ತು ಪ್ರಸಾದ ವಿನಿಯೋಗ.ಸೆ.19 ರಂದು ಮಂಗಳವಾರ ರಾತ್ರಿ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.ಸೆ.20 ರಂದು ಬುಧವಾರ ರಾತ್ರಿ 8 ಗಂಟೆಗೆ `ಸಂತೃಪ್ತಿ’ ಆಂಧಕಲಾವಿದರ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.

ಸೆ.21 ರಂದು ಗುರುವಾರ ರಾತ್ರಿ 8 ಗಂಟೆಗೆ ಕೇಡಲಸರ ಶ್ರೀಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನ ಇವರಿಂದ `ರಾಜ ಉಗ್ರಸೇನಾ’ ಯಕ್ಷಗಾನ ಪ್ರದರ್ಶನ, 

ಸೆ.22 ರಂದು ಶುಕ್ರವಾರ ರಾತ್ರಿ 8 ಗಂಟೆಗೆ `ರಸಮಂಜರಿ’ಕಾರ್ಯಕ್ರಮ, 

ಸೆ.23 ರಂದು ಶನಿವಾರ ರಾತ್ರಿ 8 ಕ್ಕೆ ಶ್ರೀಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ಇವರಿಂದ “ಭರತನಾಟ್ಯ’ಪ್ರದರ್ಶನ, 

ಸೆ.24 ರಂದು ಭಾನುವಾರ ರಾತ್ರಿ 8 ಕ್ಕೆ ತೆಕ್ಕಟ್ಟೆಯ ಓಂಕಾರ ಕಲಾವಿದರಿಂದ `ಎಷ್ಟ್ ಹೇಳಿದ್ರೂ ಆಷ್ಟೆ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ,

ಸೆ.25 ರಂದು ಸೋಮವಾರ ರಾತ್ರಿ 8 ಕ್ಕೆ ಹೆಸರಾಂತ ಜಾನಪದ ಆಯ್ದ ಅಹ್ವಾನಿತ ತಂಡಗಳಿAದ `ಬಳೆಕೋಲಾಟ’ಸ್ಪರ್ದೆ, 

ಸೆ.26 ರಂದು ಮಂಗಳವಾರ ರಾತ್ರಿ 8ಕ್ಕೆ ಶ್ರೀವಿನಾಯಕ ಮೆಲೋಡೀಸ್’ ತಂಡದವರಿAದ ರಸಮಮಜರಿ ಕಾರ್ಯಕ್ರಮ,

ಸೆ.27 ರಂದು ಬುಧವಾರ ರಾತ್ರಿ 8 ಕ್ಕೆ ರಿಪ್ಪನ್‌ಪೇಟೆ ಕೊಪ್ಪ ಹೊಸನಗರ ವಿದ್ಯಾರ್ಥಿಗಳಿಂದ `ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್’’ ಇವರಿಂದ ನೃತ್ಯ ರೂಪಕ,

ಸೆ.28 ರಂದು ಗುರುವಾರ ಮದ್ಯಾಹ್ನ 12.30 ಕ್ಕೆ ಶ್ರೀ ಸ್ವಾಮಿಯ ವಿಸರ್ಜನಾ ಪೂಜೆ ನಮತರ ಸಂಜೆ 4 ಗಂಟೆಗೆ ಶ್ರೀಸ್ವಾಮಿಯ ವಿಸರ್ಜನಾ ಮೆರವಣಿಗೆ ರಾಜಬೀದಿ ಉತ್ಸವ ಈ ರಾಜಬೀದಿ ಉತ್ಸವದಲ್ಲಿ ವಿಶೇಷ ವಾದ್ಯ ಡೋಳ್ಳುಕುಣಿತ ತಮಟೆ ಬಡಿತ ವಿವಿಧ ಗ್ರಾಮಗಳ ಜಾನಪದ ತಂಡದವರ ಭಜನೆ ಈ ವರ್ಷದ ವಿಶೇಷ ಅಕರ್ಷಣೆ ಭದ್ರಾವತಿ ಅರಕೆರೆ ವೀರಗಾಸೆ ಶಿಗ್ಗಾಂವ್ ಜಾಂಜಾ ಪಥಾಕ್, ಕೀಲುಕುದುರೆ,ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರ ಕಲಾ ಪ್ರದರ್ಶನಗೊಳ್ಳಲಿದೆ.ಇದರೊಂದಿಗೆ ರಾತ್ರಿ 10-30 ರಿಂದ ವಿನಾಯಕ ವೃತ್ತದಲ್ಲಿ ಶಿವಮೊಗ್ಗ `ಗೀತಾ ಅರ್ಕೇಸ್ಟಾ’ ತಂಡದವರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆಯುವಂತೆ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.