ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಗಣಪತಿ ಪ್ರತಿಷ್ಟಾಪನಾ ಪೂಜೆ
ರಿಪ್ಪನ್‌ಪೇಟೆ;-ಗಣಪತಿಯು ಜನಸಾಮಾನ್ಯರ ದೇವತೆ.ಗಣಪತಿ ಕೇವಲ ಒಂದು ಪಂಥದ ದೇವರಾಗದೆ ಎಲ್ಲಾ ಪಂಥದವರ ಪೂಜೆಯನ್ನು ಸ್ವೀಕರಿಸುವ ಭಗವಂತನಾದ. ಭಕ್ತರು ಗಣಪತಿಯನ್ನು ಅನೇಕ ರೂಪಗಳಲ್ಲಿ ಪೂಜಿಸುತ್ತಾ ತಮ್ಮ ಭಕ್ತಿಯ ಪರಾಕಾಷ್ಟತೆಯನ್ನು ಸಮರ್ಪಿಸುತ್ತಾ ಬಂದಿದ್ದಾರೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.
ಮೂಲೆಗದ್ದೆ ಸದಾನಂದಶಿವಯೋಗಾಶ್ರಮದಲ್ಲಿ ಗಣೇಶ ಚತುರ್ಥಿಯಂದು ಗಣಪತಿ ಪ್ರತಿಷ್ಟಾಪನೆ ನೆರವೇರಿಸಿ ಆಶೀರ್ವಚನ ನೀಡಿ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸುವ ಸಂದರ್ಭದಲ್ಲಿ ಜನರನ್ನು ಒಂದಡೇ ಸೇರಿಸುವ ಉದ್ದೇಶದಿಂದಾಗಿ ನಮ್ಮ ಪೂರ್ವಿಕರು ಗಣೇಶ ಹಬ್ಬವನ್ನು ಅಚರಣೆಗೆ ತಂದರು ವೇದಗಳಲ್ಲೂ ಗಣಪನ ಉಲ್ಲೇಖ ಬ್ರಹ್ಮಾಂಡ ಆಕಾರದ ಕಲ್ಪನೆ ಇತ್ತು ಎನ್ನಲಾಗುತ್ತಿದ್ದು ಪುರಾಣದಲ್ಲಿ 32 ರೀತಿಯ ಗಣಪತಿಯ ವರ್ಣನೆಯಿದೆ.ಹೀಗೆ ಗಣಪತಿಯ ಮಹಿಮೆಯನ್ನು ಹಲವು ಬಗೆಯಲ್ಲಿ ವರ್ಣಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಕಲ ಸದ್ಭಕ್ತರು ಹಾಜರಿದ್ದರು.