Headlines

ಸುಳುಕೋಡು ಜಯಣ್ಣ ನಿಧನ

Sulukodu Jayanna, a well-known farmer and philanthropist from Sulukodu village in Heddaripura GP limits near Ripponpete, passed away after a brief illness. His sudden demise has saddened villagers and well-wishers.

ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಕೋಡು ಗ್ರಾಮದ ಯಶಸ್ವಿ ಕೃಷಿಕ ಸುಳುಕೋಡು ಜಯಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು.

ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೊಡುಗೈ ದಾನಿ ಹಾಗೂ ಜನಾನುರಾಗಿಯಾಗಿದ್ದ ಸುಳುಕೋಡು ಜಯಣ್ಣ ಅವರು ಹೆದ್ದಾರಿಪುರ ವ್ಯಾಪ್ತಿಯ ಜನಮಾನಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಅಕಾಲಿಕ ನಿಧನ ಗ್ರಾಮಸ್ಥರಲ್ಲಿ ತೀವ್ರ ನೋವು ಮೂಡಿಸಿದೆ.

ಮೃತರು ಪತ್ನಿ ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯ ಪ್ರವೀಣ್ ಸುಳುಕೋಡು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ :

ಜಯಣ್ಣ ಅವರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಲಗೋಡು ರತ್ನಾಕರ್, ಬಿ.ಪಿ. ರಾಮಚಂದ್ರ, ಶ್ವೇತಾ ಆರ್. ಬಂಡಿ, ಉಮಾಕರ್ ಕಾನುಗೋಡು, ಆಸೀಫ್ ಭಾಷಾ, ನಿರೂಪ್ ಕುಮಾರ್ , ಚಂದ್ರು ಮಳವಳ್ಳಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

About The Author