Headlines

ಹೊಸನಗರ ತಾಲೂಕ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹೆಚ್ ಎಸ್ ನಾಗರಾಜ್ , ಪ್ರಧಾನ ಕಾರ್ಯದರ್ಶಿಯಾಗಿ ರಫ಼ಿ ರಿಪ್ಪನ್‌ಪೇಟೆ ಆಯ್ಕೆ

Hosanagara Taluk Working Journalists Association elected new office bearers, with H S Nagaraj as President and Rafi Ripponpete as General Secretary, chosen unanimously at a meeting held in Hosanagara.

ಹೊಸನಗರ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಎಸ್. ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫ಼ಿ ರಿಪ್ಪನ್‌ಪೇಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಕಾರ್ಯಕಾರಿ ಸಭೆಯಲ್ಲಿ ವೆಂಕಟೇಶ್ ಮೂರ್ತಿ ಅಧ್ಯಕ್ಷತೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಸದಸ್ಯರ ಒಮ್ಮತದಿಂದ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ವಿವರ ಹೀಗಿದೆ:

ಗೌರವಾಧ್ಯಕ್ಷರು: ವೆಂಕಟೇಶ್ ಮೂರ್ತಿ

ಅಧ್ಯಕ್ಷರು: ಹೆಚ್.ಎಸ್. ನಾಗರಾಜ್

ಪ್ರಧಾನ ಕಾರ್ಯದರ್ಶಿ: ರಫ಼ಿ ರಿಪ್ಪನ್‌ಪೇಟೆ

ಉಪಾಧ್ಯಕ್ಷರು: ಸೆಬಾಸ್ಟಿಯನ್ ಮ್ಯಾಥ್ಯೂಸ್, ನಾರಾಯಣ್ ಕಾಮತ್

ಕೋಶಾಧಿಕಾರಿ: ಕೆ.ಎಸ್. ರಾಮಕೃಷ್ಣ ಮೂರ್ತಿ

ನಿರ್ದೇಶಕರು:

ರವಿಶಂಕರ್ ರಿಪ್ಪನ್‌ಪೇಟೆ, ನಗರ ರಾಘವೇಂದ್ರ, ವಾಸಪ್ಪ ಮಾಸ್ತಿಕಟ್ಟೆ, ಮಹೇಶ್ ಹಿಂಡ್ಲೆಮನೆ, ರಾಘವೇಂದ್ರ ಹೆಚ್.ಎಸ್., ಪಿಯೂಸ್ ರೋಡ್ರಿಗಸ್, ಸದಾನಂದ ಯು.ಎಸ್., ತ.ಮ. ನರಸಿಂಹ, ಹೆಚ್.ಆರ್. ಶ್ರೀಕಂಠ, ಹರೀಶ್ ನಗರ, ದೀಪಕ್ ಸ್ವರೂಪ್, ಕೌಶಿಕ್ ಜಿ.ಕೆ.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಬಲವರ್ಧನೆ ಹಾಗೂ ಪತ್ರಕರ್ತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಮಗ್ರ ಕಾರ್ಯಯೋಜನೆ ರೂಪಿಸುವುದಾಗಿ ನೂತನ ಅಧ್ಯಕ್ಷರಾದ ಹೆಚ್ ಎಸ್ ನಾಗರಾಜ್ ಭರವಸೆ ನೀಡಿದರು.

About The Author