ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಕೊರ್ಲಿಕೊಪ್ಪ ಮೂಲದ ಬಾಳೆಕಾಯಿ ಲೋಡ್ ಮಾಡುವ ವ್ಯಕ್ತಿಯೊಬ್ಬನ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಶಿವರಾಜ್(38) ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿಯಾಗಿದ್ದು. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಹತ್ತಿರ ತಮ್ಮ ವಾಹನ ಇಟ್ಟು ಮಲಗಿದ್ದರು. ಈ ಸಂದರ್ಭದಲ್ಲಿಯೇ ಟಿಪ್ಪರ್ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಸಿಟಿವಿ ವೀಡಿಯೋ ಇಲ್ಲಿ ವೀಕ್ಷಿಸಿ👇
ಹೆಬ್ರಿ ಸಮೀಪದ ಸೋಮೇಶ್ವರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ಮತ್ತು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾಗರದಿಂದ ಕೇರಳಕ್ಕೆ ಬಾಳೆಕಾಯಿ ಲೋಡ್ ಮಾಡಿಕೊಂಡು ಹೋಗುತಿದ್ದಾಗ ನಿದ್ದೆ ಮಂಪರು ಆವರಿಸಿದ್ದರಿಂದ ಸೋಮೇಶ್ವರ ಪೆಟ್ರೋಲ್ ಬಂಕ್ ಬಳಿ ಟಾಟಾ ಏಸ್ ವಾಹನವನ್ನು ನಿಲ್ಲಿಸಿ ಅಲ್ಲೇ ಮಲಗಿದ್ದಾರೆ ಈ ಸಂಧರ್ಭದಲ್ಲಿ ಪೆಟ್ರೋಲ್ ಬಂಕ್ ಗೆ ಇನ್ನೊಂದು ಟಿಪ್ಪರ್ ಇಂಧನ ತುಂಬಿಸಿಕೊಳ್ಳಲು ಬಂದಿದ್ದು ನಂತರ ವಾಪಸ್ ಹೋಗುವಾಗ ಟಿಪ್ಪರ್ ಚಾಲಕನಿಗೆ ಅಲ್ಲಿ ಮಲಗಿದ್ದ ಕಾರ್ಮಿಕನ ಇರುವಿಕೆ ಕಾಣಲಿಲ್ಲ. ಹೀಗಾಗಿ ಏಕಾಯೇಕಿ ಟಿಪ್ಪರ್ ತಿರುಗಿಸಿಕೊಂಡು ಆತ ಮುಂದಕ್ಕೆ ಹೋಗಿದ್ದಾನೆ.
ಪರಿಣಾಮ ಟಿಪ್ಪರ್ ಚಕ್ರಕ್ಕೆ ಸಿಲುಕಿ ಕಾರ್ಮಿಕ ಶಿವರಾಜ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನೂ ಮೃತ ಕಾರ್ಮಿಕನನ್ನು ಸಾಗರ ತಾಲ್ಲೂಕಿನ ಕೊರ್ಲಿ ಕೊಪ್ಪ ನಿವಾಸಿ ಎಂದು ಗುರುತಿಸಲಾಗಿದೆ.
ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.