Sagara | ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ
ಸಾಗರ : 2023 ನೇ ಸಾಲಿನ ರಾಜ್ಯೋತ್ಸವ (ರಂಗಭೂಮಿ ಕ್ಷೇತ್ರ) ಪ್ರಶಸ್ತಿಗೆ ಭಾಜನರಾದ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ರವರನ್ನು ಅವರ ಸ್ವಗೃಹದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿ ಸನ್ಮಾನಿಸಿದರು.

ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆಳದಿ ಸಮೀಪದ ಅಡ್ಡೇರಿ ಗ್ರಾಮದವರಾದ ಜಂಬೆಯವರು. ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ “ಸಂಗ್ಯಾ-ಬಾಳ್ಯಾ” ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿಯ ನಿರ್ದೇಶನದಲ್ಲಿ ಪದವಿ ಪಡೆದಿದ್ದು, 2 ದಶಕಗಳ ಕಾಲ ಹೆಗ್ಗೋಡಿನ “ನೀನಾಸಂ” ರಂಗಶಿಕ್ಷಣ ಕೇಂದ್ರದ ಪ್ರಾಚಾರ್ಯರಾಗಿ ನಂತರ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ ಎಂದರು.

ರಾಜ್ಯದಲ್ಲೇ ಎರಡನೇ ಸಾಂಸ್ಕೃತಿಕ ನಗರ ಎಂಬ ಖ್ಯಾತಿ ಪಡೆದ ಸಾಗರಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ನನ್ನ ಕನಸಿನ ಯೋಜನೆಗಳೊಂದಾದ 12 ಕೋಟಿ ರೂ ವೆಚ್ಚದಲ್ಲಿ ಸಾಗರದಲ್ಲಿ ನಿರ್ಮಿಸಲುದ್ದೇಶಿಸಿದ್ದ ಸಾಂಸ್ಕೃತಿಕ ಭವನ (ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್) ನಿರ್ಮಿಸುವ ಕುರಿತು ಜಂಬೆ ರವರ ಬಳಿ ಚರ್ಚಿಸಿ ಸಲಹೆ ಪಡೆದಿದ್ದೆ ಎಂದು ಹರತಾಳು ಹಾಲಪ್ಪ ಈ ಸಂಧರ್ಭದಲ್ಲಿ ಸ್ಮರಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ‌ ಮೇಘರಾಜ್ , ಬಿಜೆಪಿ ಮುಖಂಡರಾದ ರಾಜನಂದಿನಿ ಕಾಗೋಡು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *