Headlines

ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್‌ — ಕಾರ್ಮಿಕನ ದುರ್ಮರಣ

ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್‌ — ಕಾರ್ಮಿಕನ ದುರ್ಮರಣ

ತೀರ್ಥಹಳ್ಳಿ: ತಾಲೂಕಿನ ಬಸವಾನಿ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಜೆ ನಡೆದಿದೆ.

ಮೃತನನ್ನು ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಎಂದು ಗುರುತಿಸಲಾಗಿದೆ. ಸತೀಶ್ ಹಲವು ವರ್ಷಗಳಿಂದ ಈ ಭಾಗದಲ್ಲಿ ಗೊನೆಗಾರನಾಗಿ ಕೆಲಸ ಮಾಡುತ್ತಿದ್ದು, ಲಕ್ಷ್ಮೀಪುರದ ರೈತರಿಬ್ಬರ ಅಡಿಕೆ ತೋಟದಲ್ಲಿ ಗೊನೆ ಕೀಳುವ ವೇಳೆ ಆತನ ಕೈಯಲ್ಲಿ ಇದ್ದ ದೋಟಿ ಆಕಸ್ಮಿಕವಾಗಿ ಮೇಲಿನ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಈ ಅನಾಹುತ ಸಂಭವಿಸಿದೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.