545 PSI ಹುದ್ದೆಗಳ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ

545 PSI ಹುದ್ದೆಗಳ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ

ಇದೇ ಡಿಸೆಂಬರ್​ 23ಕ್ಕೆ ನಿಗದಿಯಾಗಿದ್ದ 545 PSI ಹುದ್ದೆಗಳ ಮರು ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದ್ದು, ಜನವರಿ 23ಕ್ಕೆ ಪರೀಕ್ಷೆ ನಡೆಯಲಿದೆ.

ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಬೆಳಗಾವಿಯ ಸುವರ್ಣಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಅವರು ಪರೀಕ್ಷೆ ಮುಂದೂಡಿರುವುದಾಗಿ ಘೋಷಿಸಿದರು. ಮರು ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಡಿ.23ರಿಂದ ಜ. 23ಕ್ಕೆ ಮುಂದೂಡಿರುವುದಾಗಿ ಪರಮೇಶ್ವರ್​ ಮಾಹಿತಿ ನೀಡಿದರು.

ಪೊಲೀಸ್​ ನೇಮಕಾತಿಯಲ್ಲಿನ ಅಕ್ರಮ ಬೆಳಕಿಗೆ ಬಂದ ಬಳಿಕ ಇಡೀ ನೇಮಕಾತಿಯೇ ರದ್ದಾಗಿತ್ತು. ಮರು ಪರೀಕ್ಷೆ ನಡೆಸಬೇಕೆಂಬ ಸರ್ಕಾರದ ಕೂಗಿಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿತು. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮರು ಪರೀಕ್ಷಾ ದಿನಾಂಕವನ್ನು ನ.22ರಂದು ಪ್ರಕಟಿಸಿ, ಡಿ.23ಕ್ಕೆ ನಿಗದಿ ಮಾಡಿತ್ತು, ಆದರೆ, ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ದಿನಾಂಕ ಮುಂದೂಡಬೇಕೆಂಬ ಕೂಗುಗಳು ಕೇಳಿಬಂದಿದ್ದವು. ಇಂದು ಸದನದಲ್ಲೂ ಇದೇ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್​ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಜ. 23ಕ್ಕೆ 545 PSI ಹುದ್ದೆಗಳ ಮರು ಪರೀಕ್ಷೆಯನ್ನು ಮುಂದೂಡಿದ್ದಾರೆ.

ಪಿಎಸ್​ಐ ಮರು ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ನ.10ರಂದು ಆದೇಶ ನೀಡಿತು. ಅಂದಿನ ಬಿಜೆಪಿ ಸರ್ಕಾರ ಮರು ಪರೀಕ್ಷೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಗಳನ್ನು ಪರಿಶೀಲಿಸಿ, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.

Leave a Reply

Your email address will not be published. Required fields are marked *