Headlines

ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಬಾಂಧವರು

ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಬಾಂಧವರು

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ ವಿನಾಯಕ ವೃತ್ತಕ್ಕೆ ಆಗಮಿಸುತಿದ್ದಂತೆ ಹಿಂದೂ ಬಾಂಧವರು ಎಲ್ಲರಿಗೂ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದರು.

ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಾಗೂ ಮೆರವಣಿಗೆ ನೋಡಲು ಬಂದಿದ್ದ ಮಹಿಳೆಯರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ತಂಪು ಪಾನೀಯ ವಿತರಿಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಸಿಪಿಐ ಗುರಣ್ಣ ಹೆಬ್ಬಾಳ್ , ಪಿಎಸೈ ರಾಜುರೆಡ್ಡಿ , ನಗರ ಪಿಎಸೈ ಶಿವಾನಂದ ಕೋಳಿ ಇದ್ದರು.

ಮೆರವಣಿಗೆಯಲ್ಲಿ ಸಾಗುತಿದ್ದವರು ಹಿಂದೂ ಬಾಂಧವರ ಸೌಹಾರ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಈ ಸಂಧರ್ಭದಲ್ಲಿ ಗ್ರಾಪ‌ಂ ಸದಸ್ಯ ನಿರೂಪ್ ಕುಮಾರ್ , ಪ್ರಕಾಶ್ ಪಾಲೇಕರ್ , ಗಣಪತಿ ಗವಟೂರು , ನೇಮಣ್ಣ ಬಂಡಿ , ಪ್ರವೀಣ್ ಆಚಾರ್ , ವರುಣ್ ಆಚಾರ್ , ಪ್ರಶಾಂತ್ ತಳಲೆ , ನವೀನ್ ಜನನಿ , ಹರ್ಷ ಕಾಶೀನಾಥ್ ,ಶಿವಾಜಿ ಹಾಗೂ ಇನ್ನಿತರರು ಇದ್ದರು.