Headlines

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ – ಒಂದು ಗಂಟೆಯೊಳಗೆ ಆರೋಪಿಯ ಹೆಡೆಮುರಿ ಕಟ್ಟಿದ ರಿಪ್ಪನ್ ಪೇಟೆ ಪೊಲೀಸರು

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ – ಒಂದು ಗಂಟೆಯೊಳಗೆ ಆರೋಪಿಯ ಹೆಡೆಮುರಿ ಕಟ್ಟಿದ ರಿಪ್ಪನ್ ಪೇಟೆ ಪೊಲೀಸರು

ರಿಪ್ಪನ್ ಪೇಟೆ : ಅವಿವಾಹಿತ ಮಹಿಳೆ ಮೇಲೆ ದೂರದ ಸಂಬಂಧಿ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿ ಕೇವಲ ಒಂದು ಗಂಟೆಯೊಳಗೆ ಪಿಎಸೈ ರಾಜುರೆಡ್ಡಿ ನೇತ್ರತ್ವದ ಪೊಲೀಸರು ಆರೋಪಿಯ ಬಂಧಿಸಿ ಜೈಲಿಗಟ್ಟಿರುವ ಘಟನೆ ನಡೆದಿದೆ.

ಬೆಳ್ಳೂರು ನಿವಾಸಿ ಪ್ರಕಾಶ್ (40) ಬಂಧಿತ ಆರೋಪಿಯಾಗಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪ್ಱ್ಂ ವ್ಯಾಪ್ತಿಯ ಕಳಸೆ ಗ್ರಾಮದ 40 ವರ್ಷದ ಅವಿವಾಹಿತ ಮಹಿಳೆಯೊಬ್ಬರ ಮೇಲೆ ದೂರ ಸಂಬಂಧಿ ಮಂಗಳವಾರ ಮಧ್ಯಾಹ್ನ ಅತ್ಯಚಾರಕ್ಕೆ ಯತ್ನಿಸಿರುವ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ದಾಖಲಾಗುತಿದ್ದಂತೆ ಡಿವೈಸ್ಪಿ ಅರವಿಂದ್ ಕಲಗುಜ್ಜಿ , ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸೈ ರಾಜುರೆಡ್ಡಿ ನೇತ್ರತ್ವದಲ್ಲಿ ಒಂದು ಗಂಟೆಯೊಳಗೆ ಆರೋಪಿ ಬೆಳ್ಳೂರು ಗ್ರಾಮದ ನಿವಾಸಿ ಪ್ರಕಾಶ್ (48) ಎಂಬಾತನನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಕಾರ್ಯಾಚರಣೆಯಲ್ಲಿ ರಿಪ್ಪನ್ ಪೇಟೆ ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ ಆರ್ , ಸಂತೋಷ್ ಕೊರವರ , ಉಮೇಶ್ ಹಾಗೂ ಅವಿನಾಶ್ ಇದ್ದರು.