Headlines

HOSANAGARA | ಔಷಧಿ ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು  ಸಾವು

HOSANAGARA | ಔಷಧಿ ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು  ಸಾವು

ಹೊಸನಗರ: ತಾಲೂಕಿನ  ಕಿಳಂದೂರು ಗ್ರಾಮದ ನೂಲಿ- ಗೇರಿಯ ಅಡಿಕೆ ತೋಟದಲ್ಲಿ ಔಷಧ ಸಿಂಪಡಣೆ ವೇಳೆ ಕೃಷಿ ಕಾರ್ಮಿಕ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಮನೆ ನಿವಾಸಿ ಸಾದಿಕ್ (42)ಮೃತಪಟ್ಟ ಕಾರ್ಮಿಕ.

ಅ. 18ರಂದು ಸಾದಿಕ್ ಮತ್ತು ಮಂಜುನಾಥ ಎಂಬುವರು ನೂಲಿಗೇರಿ ನಿವಾಸಿ ಅಬ್ಬಾಸ್ ಅವರ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುತ್ತಿದ್ದರು. ಆಗ ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು.

ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ ಗುರುವಾರ ರಾತ್ರಿ ಮನೆಗೆ ಕರೆತರುತ್ತಿರುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.