Headlines

ಬಂಕಾಪುರದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವ ಆಚರಣೆ

ಬಂಕಾಪುರದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವ ಆಚರಣೆ

ಬಂಕಾಪುರ, ಜೂ.12: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಕನೋಜಗಲ್ಲಿಯ ಈಶ್ವರ ದೇವಸ್ಥಾನದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯ ರಾಜೇಂದ್ರ ಟೋಪಣ್ಣವರ್ ಚಾಲನೆ ನೀಡಿ ಮಾತನಾಡಿ, ಮಹಾರಾಣಾ ಪ್ರತಾಪ್ ಸಿಂಹ ಭಾರತೀಯ ಇತಿಹಾಸದ ಅತ್ಯಂತ ಧೈರ್ಯಶಾಲಿ ಆಡಳಿತಗಾರರಲ್ಲಿ ಒಬ್ಬರಾಗಿದ್ದು, ದೇಶಭಕ್ತಿ, ಶೌರ್ಯ ಹಾಗೂ ತ್ಯಾಗದ ಪ್ರತೀಕವಾಗಿದ್ದಾರೆ ಎಂದು ಹೇಳಿದರು.

ಮೊಘಲ್ ಸಾಮ್ರಾಜ್ಯದ ಅಕ್ಬರ್‌ನ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ ಹೋರಾಡಿದ ರಾಜಪೂತ್ ವಂಶದ ಕೆಚ್ಚೆದೆಯ ನಾಯಕ ಮಹಾರಾಣಾ ಪ್ರತಾಪ್ ಸಿಂಹ ಅವರು ಯುವಜನತೆಗೆ ಸದಾ ಸ್ಫೂರ್ತಿಯಾಗಿದ್ದಾರೆ. ಮಾತೃಭೂಮಿಯ ಮೇಲಿನ ಅವರ ಅಚಲ ನಿಷ್ಠೆ ಹಾಗೂ ದೇಶಪ್ರೇಮಕ್ಕೆ ಹಳದಿಘಾಟ್ ಯುದ್ಧವೇ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಸಿಂಗ್ ಭವಾನಿ ವಹಿಸಿದ್ದರು.

ಮಾಜಿ ಪುರಸಭೆ ಸದಸ್ಯ ಮಾಲತೇಶ್ ಬಾಬುಸಿಂಗನವರ್, ರತನ್ ಟೋಪಣ್ಣವರ್, ನಾರಾಯಣಸಿಂಗ್ ಬಾಬುಸಿಂಗನವರ್, ನಾರಾಯಣ ಸಿಂಗ್ ದೊಡ್ಡಮನಿ, ರಾಘುಸಿಂಗ್ ಬಾಬುಸಿಂಗನವರ್, ಧರ್ಮಸಿಂಗ್ ಡಂಬಳ್, ಭರತಸಿಂಗ್ ಚೌವ್ಹಿ, ಅರ್ಜುನ್ ಸಿದ್ದಪ್ಪನವರ್, ವಿನಾಯಕ್ ಶಿವಪ್ಪನವರ್, ಗುಲಾಬ್ ಸಿಂಗ್ ಕಲಘಟಗಿ, ಮಂಜುಸಿಂಗ್ ಪಾಂಡೆ, ದುರ್ಗಾ ಸಿಂಗ್ ಕಲಘಟಗಿ, ನೇತಾಜಿ ಜಾದವ್, ನಾಗರಾಜ್ ಶಿವಪ್ಪನವರ್ ಹಾಗೂ ಪವನ್ ಸಿಂಗ್ ತೆರಸನ್ನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ನಿಂಗರಾಜ್ ಕುಡಲ್, ಬಂಕಾಪುರ, ಹಾವೇರಿ ಜಿಲ್ಲೆ.

About The Author