w
Headlines
Home » ಹಳೆಯ ದ್ವೇಷಕ್ಕೆ ಮಚ್ಚಿನಿಂದ ದಾಳಿ ಪ್ರಕರಣ : ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ

ಹಳೆಯ ದ್ವೇಷಕ್ಕೆ ಮಚ್ಚಿನಿಂದ ದಾಳಿ ಪ್ರಕರಣ : ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ

GridArt 20260505

ಹಳೆಯ ದ್ವೇಷಕ್ಕೆ ಮಚ್ಚಿನಿಂದ ದಾಳಿ ಪ್ರಕರಣ : ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ

Six accused convicted in a 2020 attempted murder case in Bhadravathi have been sentenced to 3 years imprisonment, while the main acuse received 7 years jail. Court also imposed a ₹2.3 lakh fine and ordered ₹1.5 lakh compensation to the victim.

ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆ ಮಚ್ಚು ಬಳಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಈ ಘಟನೆ 10/05/2020ರಂದು ಭದ್ರಾವತಿ ತಾಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬು ಅವರ ಮನೆ ಹಿಂಭಾಗದ ತೆಂಗಿನ ತೋಟದಲ್ಲಿ ನಡೆದಿತ್ತು.

ಕಿರಣ್ (29), ಮಂಜುನಾಥ್ (25) ಮತ್ತು ಅರುಣ್ (24) ಸ್ಥಳದಲ್ಲಿದ್ದಾಗ, ಹಳೆಯ ದ್ವೇಷದ ಹಿನ್ನೆಲೆ ಆರೋಪಿತರಾದ ಅಜೇಯ @ ಅಜ್ಜಿ, ತೇಜು @ ತೇಜಸ್ವಿ @ ಟೀಕು, ಮನು @ ಗೊಣ್ಣೆ ಮಧು @ ಮನೋಜ್, ಆದರ್ಶ @ ಆದು, ಅರುಣ್ ಹಾಗೂ ಪಾನಿಪುರಿ ರಂಗ @ ರಂಗ ಅವರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದರು.

ದಾಳಿಯ ವೇಳೆ ಮನು ಮಂಜುನಾಥ್ ಅವರನ್ನು ಹಿಡಿದಿಟ್ಟುಕೊಂಡಿದ್ದು, ಅಜೇಯನು ಕಬ್ಬಿಣದ ಮಚ್ಚಿನಿಂದ ಮಂಜುನಾಥ್ ಅವರ ಬಲಗೈ, ಮೊಣಕೈ ಮತ್ತು ಸೊಂಟದ ಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿಸಿದ್ದನು. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಆಗಿನ ಎಎಸ್‌ಐ ಕುಬೇರಪ್ಪ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು 04/05/2026ರಂದು ತೀರ್ಪು ನೀಡಿದ್ದು, ಪ್ರಮುಖ ಆರೋಪಿಯಾದ ಅಜೇಯನಿಗೆ ಐಪಿಸಿ ಕಲಂ 307 ಅಡಿಯಲ್ಲಿ 7 ವರ್ಷ ಕಠಿಣ ಕಾರಾವಾಸ ವಿಧಿಸಲಾಗಿದೆ. ಉಳಿದ ಆರೋಪಿತರಿಗೂ ಕಲಂ 143, 144, 147, 148, 323, 324 ಅಡಿಯಲ್ಲಿ ತಲಾ 3 ವರ್ಷ ಕಠಿಣ ಕಾರಾವಾಸ ಹಾಗೂ ಒಟ್ಟು 2.30 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇದಲ್ಲದೆ, ಗಾಯಾಳುವಾದ ಮಂಜುನಾಥ್ ಅವರಿಗೆ 1.50 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.