w
Headlines
Home » ಹೊಸನಗರ ಸಮೀಪ ಖಾಸಗಿ ಬಸ್ ಪಲ್ಟಿ: 11 ಪ್ರಯಾಣಿಕರಿಗೆ ಗಾಯ

ಹೊಸನಗರ ಸಮೀಪ ಖಾಸಗಿ ಬಸ್ ಪಲ್ಟಿ: 11 ಪ್ರಯಾಣಿಕರಿಗೆ ಗಾಯ

GridArt 20260508

ಹೊಸನಗರದ ಸಮೀಪ ಖಾಸಗಿ ಬಸ್ ಪಲ್ಟಿ: 11 ಪ್ರಯಾಣಿಕರಿಗೆ ಗಾಯ

A private bus traveling from Bengaluru to Kundapura overturned near Hosanagara on NH 766C after the driver lost control. Eleven passengers sustained minor injuries and were shifted to the government hospital for treatment.

ಹೊಸನಗರ, ಮೇ 8: ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ ಜಯನಗರದ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಇಂದು ಮುಂಜಾನೆ ಖಾಸಗಿ ಬಸ್ ಪಲ್ಟಿಯಾಗಿ 11 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ “ಸಾಗರ್” ಹೆಸರಿನ ಖಾಸಗಿ ಬಸ್ ಇಂದು ಬೆಳಿಗ್ಗೆ ಸುಮಾರು 5:15ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ಮಗುಚಿಬಿದ್ದಿದೆ. ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯಲ್ಲಿ ಒಟ್ಟು 11 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದರು. ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ಪಲ್ಟಿಯಾದ ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಿಕ ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.