POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಸಿಡಿಲು ಬಡಿದು ಕೋಳಿ ವ್ಯಾಪಾರಿ ದಾರುಣ ಸಾವು: ಅಂಗಡಿಗೆ ಬೆಂಕಿ, ಕೋಳಿಗಳು ಸುಟ್ಟು ಭಸ್ಮ

Picsart 26 03 31 21 26 32

ಸಿಡಿಲು ಬಡಿದು ಕೋಳಿ ವ್ಯಾಪಾರಿ ದಾರುಣ ಸಾವು: ಅಂಗಡಿಗೆ ಬೆಂಕಿ, ಕೋಳಿಗಳು ಸುಟ್ಟು ಭಸ್ಮ

A 45-year-old poultry trader died after being struck by lightning in Ramanagara near Kumsi. The incident also caused a fire in his shop, killing several chickens.


ಕುಂಸಿ: ಸಮೀಪದ ರಾಮನಗರದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದ ಪರಿಣಾಮ ಕೋಳಿ ವ್ಯಾಪಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತರನ್ನು ಹಾರನಹಳ್ಳಿಯ ಶೇಖ್ ಮುಜೀಬ್ ಉರ್ ರಹಮಾನ್ (45) ಎಂದು ಗುರುತಿಸಲಾಗಿದೆ. ಇವರು ರಾಮನಗರ ಬಸ್‌ಸ್ಟ್ಯಾಂಡ್ ಸಮೀಪ ಮರದ ಕೆಳಗೆ ಕೋಳಿ ಅಂಗಡಿ ನಡೆಸುತ್ತಿದ್ದರು.

ಸೋಮವಾರ ಸಂಜೆ ಮಳೆಯೊಂದಿಗೆ ಭಾರೀ ಸಿಡಿಲು ಬಡಿದಿದ್ದು, ಕೋಳಿ ಅಂಗಡಿ ಮತ್ತು ಪಕ್ಕದಲ್ಲಿದ್ದ ಮರಕ್ಕೆ ಮಿಂಚು ತಗುಲಿದೆ. ಇದೇ ವೇಳೆ ಅಂಗಡಿಯಲ್ಲಿ ಇದ್ದ ಶೇಖ್ ಮುಜೀಬ್ ಉರ್ ರಹಮಾನ್ ಅವರಿಗೂ ಸಿಡಿಲು ಬಡಿದು ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಪರಿಣಾಮ ಅಂಗಡಿಗೆ ಬೆಂಕಿ ಹೊತ್ತಿಕೊಂಡು, ಅಂಗಡಿಯಲ್ಲಿ ಇದ್ದ ಕೋಳಿಗಳು ಸುಟ್ಟು ಭಸ್ಮವಾಗಿವೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.