POSTMANNEWS

ನೈಜ ಸುದ್ದಿ ನೇರ ಬಿತ್ತರ..

ಯುವತಿ ನಾಪತ್ತೆ – ಪತ್ತೆಗೆ ಪೊಲೀಸರ ಮನವಿ

A 17-year-old girl, Shashikala from Udri Waddageri village in Soraba taluk of Shivamogga district, has been reported missing since February 1. Police have appealed to the public for information.

ಸೊರಬ ತಾಲೂಕಿನ ಉದ್ರಿ ವಡ್ಡಿಗೇರಿ ನಿವಾಸಿ ಹನುಮಂತರಪ್ಪ ಅವರ ಪುತ್ರಿ 17 ವರ್ಷದ ಶಶಿಕಲಾ ಎಂಬ ಯುವತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಫೆಬ್ರವರಿ 1ರಂದು ‘ಗೇಟ್ ಹತ್ತಿರ ಹೋಗಿ ಬರುತ್ತೇನೆ’ ಎಂದು ಮನೆಯಿಂದ ಹೊರಟ ಶಶಿಕಲಾ ಈವರೆಗೂ ಮನೆಗೆ ವಾಪಸ್ಸಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶಶಿಕಲಾಳ ಚಹರೆ ಸುಮಾರು 4.8 ಅಡಿ ಎತ್ತರ, ದುಂಡು ಮುಖ, ಕಪ್ಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಚೂಡಿದಾರ್ ಧರಿಸಿರುತ್ತಿದ್ದಳು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಯುವತಿ ಯಾರಿಗಾದರೂ ಕಂಡು ಬಂದಲ್ಲಿ ಅಥವಾ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ (☎️ 08182-261400), ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಎಎಸ್‌ಪಿ ಸಾಗರ ಉಪವಿಭಾಗ (☎️ 08183-226082), ಪಿಐ ಸಾಗರ ಗ್ರಾಮಾಂತರ ಠಾಣೆ ( 9480803361) ಅಥವಾ ಪಿಎಸ್‌ಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ( 9480803385) ಅವರನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

About The Author