w
Headlines
Home » ಸೂಡೂರು ಬಳಿ ಹಿಟ್ ಅಂಡ್ ರನ್: 24 ಗಂಟೆಯೊಳಗೆ ಆರೋಪಿತ ವಾಹನ ಪತ್ತೆ, ಪೊಲೀಸರ ಕಾರ್ಯಾಚರಣೆ ಯಶಸ್ವಿ

ಸೂಡೂರು ಬಳಿ ಹಿಟ್ ಅಂಡ್ ರನ್: 24 ಗಂಟೆಯೊಳಗೆ ಆರೋಪಿತ ವಾಹನ ಪತ್ತೆ, ಪೊಲೀಸರ ಕಾರ್ಯಾಚರಣೆ ಯಶಸ್ವಿ

GridArt 20260112 140135805 wm.jpg

Ripponpete police traced the vehicle involved in a hit and run accident near Suduru Gate within 24 hours, in which a 62-year-old man lost his life.

ಸೂಡೂರು ಬಳಿ ಹಿಟ್ ಅಂಡ್ ರನ್: 24 ಗಂಟೆಯೊಳಗೆ ಆರೋಪಿತ ವಾಹನ ಪತ್ತೆ, ಪೊಲೀಸರ ಕಾರ್ಯಾಚರಣೆ ಯಶಸ್ವಿ


ರಿಪ್ಪನ್‌ಪೇಟೆ: ಸೂಡೂರು ಗೇಟ್ ಸಮೀಪ ನಡೆದ ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ, ಓರ್ವ ವ್ಯಕ್ತಿಯ ಸಾವಿಗೆ ಕಾರಣವಾದ ವಾಹನವನ್ನು ಕೇವಲ 24 ಗಂಟೆಯೊಳಗೆ ಪತ್ತೆಹಚ್ಚುವಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸೈ ರಾಜು ರೆಡ್ಡಿ ನೇತೃತ್ವದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಸೂಡೂರು ಗೇಟ್ ಬಳಿ ಬೈಕ್‌ಗೆ ಹಿಂಬದಿಯಿಂದ ಅನಾಮಧೇಯ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹಣಗೆರೆ ಕಟ್ಟೆ ಗ್ರಾಮದ ನಿವಾಸಿ ಸುಬ್ರಹ್ಮಣ್ಯ (62) ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ದುರ್ಘಟನೆ ಹಿನ್ನೆಲೆಯಲ್ಲಿ ಪೊಲೀಸರು ತ್ವರಿತ ತನಿಖೆ ನಡೆಸಿ ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆಹಚ್ಚಿದ್ದಾರೆ.


ತನಿಖೆಯಲ್ಲಿ, ಕಲ್ಲುಪುಡಿ ಸಾಗಿಸುತ್ತಿದ್ದ ಹತ್ತು ಚಕ್ರದ ಲಾರಿ (ನೋಂದಣಿ ಸಂಖ್ಯೆ: KA 16 C 0275) ಸುಬ್ರಹ್ಮಣ್ಯ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಸುಬ್ರಹ್ಮಣ್ಯ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.


ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆ ನಡೆದ 24 ಗಂಟೆಯೊಳಗೆ ಲಾರಿಯನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ರಾಮಚಂದ್ರ, ವಿಶ್ವನಾಥ್ ಹಾಗೂ ಅವಿನಾಶ್ ಭಾಗವಹಿಸಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.