 
        
            ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ
ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಕಳೆದ 5 ದಶಕದಿಂದ ಅಕ್ಕಿ ಹಾಗೂ ಭತ್ತ ವ್ಯಾಪಾರ ನಡೆಸುತ್ತಿದ್ದ ತೀರ್ಥಹಳ್ಳಿ ರಸ್ತೆಯ ನಿವಾಸಿ ಎಸ್. ನಾಗರಾಜ್ ಭಗತ್ (82) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಮೃತರ ಅಂತ್ಯಕ್ರಿಯೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ನೆರವೇರಿತು.
 
                         
                         
                         
                         
                         
                         
                         
                         
                         
                         
         
         
         
         
         
         
         
        