Headlines

ರಿಪ್ಪನ್ ಪೇಟೆ | ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ | ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ಪಟ್ಟಣದ ಸಾವರ್ಕರ್ ರಸ್ತೆಯ ಕಾಂಕ್ರೀಟ್ ರಸ್ತೆ , ತಮ್ಮಡಿಕೊಪ್ಪ ಗ್ರಾಮದ ಊರೊಳಗಿನ ರಸ್ತೆ ,ಕೊಣನಜೆಡ್ಡು ರಸ್ತೆ  ಹಾಗೂ ಆಕಾಶ್ ಮಕ್ಕಿ ಗ್ರಾಮದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ ನೇರವೇರಿಸಿದರು.

ವಿವಿಧ ಗ್ರಾಮಗಳಲ್ಲಿ ಶಂಕುಸ್ಥಾಪನೆಯ ನಂತರ  ಡಿ.ಸಿ.ಸಿ ಬ್ಯಾಂಕ್ ನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ  ಹೊಸನಗರ ತಾಲೂಕಿನ ಅಭಿವೃದ್ಧಿಗಾಗಿ ಬದ್ಧನಾಗಿದ್ದೇನೆ. ರಿಪ್ಪನ್ ಪೇಟೆಯ ಅನೇಕ ರಸ್ತೆಗಳ ಕಾಮಗಾರಿಗೆ ನಾನು ಹಣ ಬಿಡುಗಡೆಗೊಳಿಸಿದ್ದೆನೆ‌. ರಿಪ್ಪನ್ ಪೇಟೆಯನ್ನ ಪಟ್ಟಣ ಪಂಚಾಯತ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೆನೆ‌. ರಿಪ್ಪನ್ ಪೇಟೆಯ ಅಭಿವೃದ್ಧಿಗೆ ನಾವು ಶ್ರಮವಹಿಸುತ್ತೆವೆ ಎಂದರು.

ನಂತರ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸಾವರ್ಕರ್ ರಸ್ತೆಯ ಅಭಿವೃದ್ಧಿ ಅವಶ್ಯಕತೆ ಇತ್ತು ಈ ಕೊರತೆಯನ್ನು ನಮ್ಮ ನೆಚ್ಚಿನ ಶಾಸಕರು ನೀಗಿಸಿದ್ದಾರೆ. ಶಾಸಕರು ಮುಂದಿನ ದಿನಗಳಲ್ಲಿ ಸಚಿವರಾಗಬೇಕು ಆಗ ನಮ್ಮೂರಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮೀ , ಮಾಜಿ ತಾ.ಪಂ ಸದಸ್ಯ ಎನ್ .ಚಂದ್ರೇಶ್,ಗ್ರಾ.ಪಂ ಸದಸ್ಯ ಗಣಪತಿ, ಪ್ರಕಾಶ್ ಪಾಲೇಕರ್,ಮಧುಸೂಧನ್, ಮಹಾಲಕ್ಷ್ಮಿ ಅಣ್ಣಪ್ಪ, ಎಂ.ಎಂ.ಪರಮೇಶ್ , ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ ಆಚಾರ್, ಶ್ರೀಧರ್, ವಿಜಯ್ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಿದ್ದರು.