POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹ

GridArt 20251221

ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹ

Demand that Siddaramaiah resign from the CM post as promised

ರಿಪ್ಪನ್‌ಪೇಟೆ;- 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರವರ ಮಧ್ಯ ಎರಡುವರೆ ವರ್ಷಗಳ ಅವಧಿಗೆ ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಸ್ಥಾನದ ಒಪ್ಪಂದವಾಗಿರುವುದನ್ನು ಮನಗೊಂಡು ರಾಜ್ಯದ ಸಿ.ಎಂ.ಸ್ಥಾನಕ್ಕೆ ಈ ಕೊಡಲೆ ಸಿದ್ದರಾಮಯ್ಯ ಮುಚ್ಚಿಕೊಂಡು ರಾಜೀನಾಮೆ ಕೊಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಆಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.

ಕಲ್ಲೂರು ಗ್ರಾಮದಲ್ಲಿ ತಮ್ಮ ಸ್ವಗೃಹದಲ್ಲಿ  ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಡಿನ ಜನತೆ ಕಾಂಗ್ರೆಸ್‌ಗೆ ಐದು ವರ್ಷ ಕಾಲ ಅಡಳಿತ ನಡೆಸಲು ಆಧಿಕಾರ ನೀಡಿದ್ದಾರೆ.ಸಿದ್ದರಾಮಯ್ಯ ಹೇಳುವಂತೆ ನಾನೇ ಐದು ವರ್ಷ ಮುಖ್ಯಮಂತ್ರಿಯೆಂದು ಹೇಳಿಕೊಳ್ಳುತ್ತಾ ಇರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತ ಪಡಿಸಿ ತಮ್ಮಿಬ್ಬಿರಲ್ಲಿ ನಡೆದ ಒಪ್ಪಂದAತೆ ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕಾಗಿ ಶ್ರಮವಹಿಸಿರುವ ಡಿ.ಕೆ.ಶಿವಕುಮಾರರವರಿಗೆ ಅಧಿಕಾರಿ ಬಿಟ್ಟುಕೊಡುವಂತೆ ಪಕ್ಷಾತೀತವಾಗಿ ನಾವು ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.

ಒಪ್ಪಂದವಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಅವರು ಚೀಲಾಗಳು ಅಲ್ಲಗೆಳೆಯುತ್ತಿದ್ದು ಎಐಸಿಸಿ ಹೈಕಮಾಂಡ್ ಸೂಚನೆಯನ್ನೇ ದಿಕ್ಕರಿಸುತ್ತಿರುವದರಿಂದ ಕೊಡಲೇ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯನವರ ಚೀಲಾಗಳ ಮೇಲೆ ಶಿಸ್ತು ಕ್ರಮ ಕೈಗೊಂಡು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಸ್ಥಾನವನ್ನು ತೆರವುಮಾಡಿ ಶಿವಕುಮಾರಗೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮತ್ತು  ಸೋನಿಯಾಗಾಂಧಿಗೆ ರಾಹುಲ್‌ಗಾಂಧಿಗೆ ಹಾಗೂ ಸುರ್ಜಿವಾಲ್,ವೇಣುಗೋಪಾಲ ಇವರಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸಿರುವುದಾಗಿ ವಿವರಿಸಿದರು.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಕಾಂಗ್ರಸ್ ಹೈಕಮಾಂಡ್‌ಗೆ ನೇರಾನೇರ ಸವಾಲುಸೆದು ಪಕ್ಷದ ಶಿಸ್ತುನ್ನು ಉಲ್ಲಂಘಿಸಿದ್ದಾರೆ.ತಮ್ಮ ಪುತ್ರ ಹಾಗೂ ಎಂ.ಎಲ್.ಸಿ.ಯತೀಂದ್ರ ಸಿದ್ದಯಾಮಾಯ್ಯ ನವರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಎರಡುವರೆ ವರ್ಷಗಳು ಮಾತ್ರ ಮುಖ್ಯಮಂತ್ರಿ ಎಂದು ಮಾತುಕತೆ ಅಗಿಯೇ ಇಲ್ಲ ಎಂದು ಹೇಳಿಸಿ ಕರ್ನಾಟಕದಲ್ಲಿ ಆಧಿಕಾರ ಹಂಚಿಕೆಯ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ದೇವರಾಜ್ ಅರಸುರವರ ಹೆಚ್ಚು ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಮುರಿಯಲು ಅವಕಾಶ ಮಾಡಿಕೊಡಿ ಎಂದು ಗೋಗೆರೆಯುತ್ತಿದ್ದಾರೆ.ಹಿಂದುಳಿದ ವರ್ಗಗಳ ಅಯೋಗದ ವರದಿಯನ್ನು ಜಾರಿಗೊಲಿಸಲು ಮುಖ್ಯಮಂತ್ರಿಯಾಗಿರಲು ತಮಗೆ ಇನ್ನೂ ಹೆಚ್ಚಿನ ಅವಕಾಶವನ್ನು ನೀಡಬೇಕೆಂದು ಹೈಕಮಾಂಡ್ ಮುಂದೆ ಇಲ್ಲಸಲ್ಲದ ನೆಪ ಒಡ್ಡುತ್ತಿದ್ದಾರೆ.ರಾಜ್ಯದ ಜನ ತಮಗೆ ಐದು ವರ್ಷವಿಡೀ ಮುಖ್ಯಮಂತ್ರಿ ಅಲಂಕರಿಸಲು ಜನಾದೇಶವನ್ನು ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.

ಸಿದ್ದುಗೆ ಕನಸು :

ಕರ್ನಾಟಕ ರಾಜ್ಯದಲ್ಲಿ ಏಳುವರೆ ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿ ಆಧಿಕಾರವನ್ನು ಆನುಭವಿಸಿರುವ ಸಿದ್ದರಾಮಯ್ಯನವರಿಗೆ ಈಗ ಮುಖ್ಯಮಂತ್ರಿ ಸ್ಥಾನ ಕೈತಪ್ಪುವುದೋ ಎಂಬ ಆಭದ್ರತೆ ಕಾಡತೊಡಗಿದೆ.ಸುಧೀರ್ಘ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಅನುಭವಸಿರುವ ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದರೆ ನೀರೊಳಗಿದ್ದ ಮೀನಿನ್ನು ಮರಳು ದಂಡೆಯ ಮೇಲೆ ಎಸೆದಂತೆ ವಿಲಿವಿಲಿ ಒದ್ದಾಡಬೇಕೆಂಬ ಕನಸು ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ದಿನನಿತ್ಯ ಬೀಳತೊಡಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಆಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಳಲೆ ಸಹಕಾರ ಬ್ಯಾಂಕ್ ಮಾಜಿ ಆಧ್ಯಕ್ಷ ಸಹಕಾರಿ ದುರೀಣ ಕೆ.ಎಸ್.ಲೋಕಪ್ಪಗೌಡರು, ಈ.ಡಿ.ಮಂಜುನಾಥ, ಗಂಗಾಧರ,ನಾಗರಾಜ ಏಲಕ್ಕಿಕೊಪ್ಪ,ಶೇಖರಪ್ಪ ಕೆ.ಟಿ., ರಾಜೇಂದ್ರಗೌಡರು, ಕೆ.ವೈ.ನಾಗರಾಜ್,ವಿಶ್ವನಾಥಕಲ್ಲೂರು.ಇನ್ನಿತರರು ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.