ಸ್ಥಳ – ಶ್ರೀ ರಾಮಮಂದಿರ ,ಬಿಎಸ್ ಎನ್ ಎಲ್ ಕಛೇರಿ ಮುಂಭಾಗ ರಿಪ್ಪನ್ ಪೇಟೆ
ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ತೆರಳುತ್ತಿದ್ದ ಯುವತಿಯ ಸರ ಅಪಹರಣ
ಶಿವಮೊಗ್ಗ : ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬರ ಸರವನ್ನು ಕಳ್ಳನೊಬ್ಬ ಎಳೆದು ಕದ್ದೊಯ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಪೇಪರ್ ಫ್ಯಾಕ್ಟರಿಯ ಶಾರದ ನಗರ ನಿವಾಸಿಯಾದ ಯುವತಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಸವಾರ ಕಳ್ಳನೊಬ್ಬ ಆಕೆಯ ಕೊರಳಲ್ಲಿದ್ದ 9 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಕದ್ದೊಯ್ದಿದ್ದಾನೆ.
ಅಕಸ್ಮಿಕ ಎಳೆಯಾಟದಿಂದ ಯುವತಿ ಬೈಕ್‌ನಿಂದ ಕೆಳಗೆ ಬಿದ್ದು ಸಣ್ಣ ಗಾಯಗೊಂಡಿದ್ದು, ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಳಿಕ ಯುವತಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.




