Headlines

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ: ನಗರದ ಹೊರವಲಯದ ಲಕ್ಷ್ಮೀಪುರದಿಂದ ಶ್ರೀರಾಂಪುರಕ್ಕೆ ಹೋಗುವ ರಿಂಗ್  ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಸಿಪಿಐ ಕೆ.ಟಿ. ಗುರುರಾಜ್, ಪಿಎಸ್ ಐ ಎಂ.ರಘುವೀರ್, ಎಎಸ್ ಐ ಚಂದ್ರಾನಾಯ್ಕರ ತಂಡ ದಾಳಿ ಮಾಡಿ
ಟಿಪ್ಪುನಗರದ 37 ವರ್ಷದ ಶಾಹಿದ್ ಖಾನ್ @
ಶಾಹಿದ್, ಸೂಳೆಬೈಲಿನ 23 ವರ್ಷದ ಮೊಹಮ್ಮದ್ ಜಾಫರ್ ಸಾದಿಕ್ @ ಜಾಫರ್ ಸಾದಿಖ್ ಅವರನ್ನು ಬಂಧಿಸಿದೆ.

ಸ್ಕಾರ್ಪಿಯೋ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ  ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲಾಯಿತು.ಆರೋಪಿತರಿಂದ 1ಕೆ.ಜಿ. 420 . ಗ್ರಾಂ ಗಾಂಜಾ, 24 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.