Headlines

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮೇಜರ್ ಸರ್ಜರಿ’ ಸಿದ್ಧ! – ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ | ಬೇಳೂರು ಗೋಪಾಲಕೃಷ್ಣಗೆ ಸಿಗುತ್ತಾ ಮಂತ್ರಿಗಿರಿ!? ಈ ಸುದ್ದಿ ನೋಡಿ

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮೇಜರ್ ಸರ್ಜರಿ’ ಸಿದ್ಧ! – ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ | ಬೇಳೂರು ಗೋಪಾಲಕೃಷ್ಣಗೆ ಸಿಗುತ್ತಾ ಮಂತ್ರಿಗಿರಿ!? ಈ ಸುದ್ದಿ ನೋಡಿ

ಬೆಂಗಳೂರು, ನವೆಂಬರ್ 16: ರಾಜ್ಯ ಕಾಂಗ್ರೆಸ್ ಪಾಳೆಯಲ್ಲಿ ಬಹುಕಾಲದಿಂದ ಕಾದಿದ್ದ ಭಾರೀ ಬದಲಾವಣೆಯ ಚರ್ಚೆ ಈಗ ವೇಗ ಪಡೆದುಕೊಂಡಿದೆ. ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗಳನ್ನು ಭೇಟಿಯಾದುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಇವರಿಗೆ ಸಚಿವ ಸ್ಥಾನ ಸಿಗುವ ಸಂಭವ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ಸೂಚಿಸುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದ ಹಿನ್ನೆಲೆಯಲ್ಲಿ, ಪಕ್ಷದೊಳಗಿನ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಶಮನಪಡಿಸಲು ಮತ್ತು ಆಡಳಿತಕ್ಕೆ ಪುನರ್‌ಜೀವ ನೀಡಲು ಸಂಪುಟ ಪುನಾರಚನೆ ಅನಿವಾರ್ಯ ಎಂದು ಸಿಎಂ ಸಿದ್ದರಾಮಯ್ಯ ವಾದಿಸುತ್ತಿದ್ದರು. ಈ ಬಾರಿ ಅವರ ದೆಹಲಿ ಮಿಷನ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಹೈಕಮಾಂಡ್ ಸಂಪುಟ ಸರ್ಜರಿಗೆ ‘ಅಸ್ತು’ ಎಂದಿದೆ.

ಈ ಬೆಳವಣಿಗೆ ಹೊಸ ಸಚಿವ ಆಕಾಂಕ್ಷಿಗಳಿಗೆ ಹಬ್ಬದ ಸಂಭ್ರಮ ತಂದಿದ್ರೆ, ಕೆಲ ಹಾಲಿ ಸಚಿವರಲ್ಲಿ ನಡುಕ ಹುಟ್ಟಿಸಿದೆ. ರಾಹುಲ್ ಗಾಂಧಿಯವರ ಒಪ್ಪಿಗೆಯ ನಂತರ ಪಕ್ಷದೊಳಗೆ ಲಾಬಿಯ ಜ್ವರ ಏರಿದೆ.

ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸಣ್ಣಪುಟ್ಟ ಬದಲಾವಣೆ ಅಲ್ಲ, ನೇರ “ಮೇಜರ್ ಸರ್ಜರಿ”ಗೆ ಮುಂದಾಗಿದೆ. ಕಾರ್ಯಕ್ಷಮತೆ ಕಡಿಮೆ ಇರೋವರು, ವಿವಾದಗಳಲ್ಲಿ ಸಿಲುಕಿದವರು ಹಾಗೂ ಹಿರಿಯರನ್ನು ಸಂಪುಟದಿಂದ ತೆಗೆದು ಸಂಘಟನೆಯಲ್ಲಿ ಬಳಸುವ ಯೋಜನೆಯೂ ಹೈಕಮಾಂಡ್ ಬಳಿ ಸಿದ್ದವಾಗಿದೆ. 10ರಿಂದ 15 ಮಂದಿ ಸಚಿವರು ಹೊರಬೀಳುವ ಸಾಧ್ಯತೆ ಇದೆ.

➡️ ಸಂಪುಟದಿಂದ ಯಾರೆಲ್ಲ OUT?

ದಿನೇಶ್ ಗುಂಡೂರಾವ್ (ಆರೋಗ್ಯ)

ಎನ್.ಎಸ್. ಬೋಸರಾಜು (ಸಣ್ಣ ನೀರಾವರಿ, ವಿಜ್ಞಾನ–ತಂತ್ರಜ್ಞಾನ)

ಡಿ. ಸುಧಾಕರ್ (ಯೋಜನೆ–ಸಾಂಖ್ಯಿಕ)

ರಹೀಂ ಖಾನ್ (ಪೌರಾಡಳಿತ)

ಶಿವಾನಂದ ಪಾಟೀಲ್ (ಸಕ್ಕರೆ–ಜವಳಿ)

ಕೆ.ಹೆಚ್. ಮುನಿಯಪ್ಪ (ಆಹಾರ–ನಾಗರೀಕ ಸರಬರಾಜು)

ಹೆಚ್.ಸಿ. ಮಹದೇವಪ್ಪ (ಸಮಾಜ ಕಲ್ಯಾಣ)

ಶರಣಬಸಪ್ಪ ದರ್ಶನಾಪೂರ (ಸಣ್ಣ ಕೈಗಾರಿಕೆ)

ಡಾ. ಎಂ.ಸಿ. ಸುಧಾಕರ (ಉನ್ನತ ಶಿಕ್ಷಣ)

ಎಸ್.ಎಸ್. ಮಲ್ಲಿಕಾರ್ಜುನ (ತೋಟಗಾರಿಕೆ–ಗಣಿ)

ಆರ್.ಬಿ. ತಿಮ್ಮಾಪುರ್ (ಅಬಕಾರಿ)

ಕೆ. ವೆಂಕಟೇಶ್ (ಪಶುಸಂಗೋಪನೆ)

➡️ ಸಿದ್ದರಾಮಯ್ಯ ಸಂಪುಟಕ್ಕೆ ಯಾರೆಲ್ಲ IN?

ಬಿ.ಕೆ. ಹರಿಪ್ರಸಾದ್

ಯು.ಟಿ. ಖಾದರ್

ಗೋಪಾಲಕೃಷ್ಣ ಬೇಳೂರು

ಕೆ.ಎನ್. ರಾಜಣ್ಣ

ಆರ್.ವಿ. ದೇಶಪಾಂಡೆ

ಎಂ. ಕೃಷ್ಣಪ್ಪ

ರಿಜ್ವಾನ್ ಅರ್ಷದ್

ಮಾಗಡಿ ಬಾಲಕೃಷ್ಣ

ರೂಪಕಲಾ ಶಶಿಧರ್

ಶಿವಲಿಂಗೇಗೌಡ

ನರೇಂದ್ರಸ್ವಾಮಿ

ಲಕ್ಷ್ಮಣ ಸವದಿ

ಪ್ರಸಾದ್ ಅಬ್ಬಯ್ಯ

ಸಿ.ಎಸ್. ನಾಡಗೌಡ

ಬಸವರಾಜ ರಾಯರೆಡ್ಡಿ

ಬಿ.ಆರ್. ಪಾಟೀಲ್

ರಾಜಕೀಯ ವಲಯದ ಹೇಳಿಕೆ ಏನೆಂದರೆ—ಮುಂದಿನ ದಿನಗಳಲ್ಲಿ ಇದು ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಸಮೀಕರಣಗಳನ್ನು ತರುತ್ತದೆ. ಹೊಸ ಮುಖಗಳಿಗೆ ಅವಕಾಶ, ಹಿರಿಯರಿಗೆ ಹೊಸ ಜವಾಬ್ದಾರಿ ಮತ್ತು ಆಡಳಿತಕ್ಕೆ ಹೊಸ ಚೈತನ್ಯ ನೀಡುವ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ.