Headlines

ರೌಡಿಸಂ ಚಟುವಟಿಕೆ  ನಿಗ್ರಹಕ್ಕೆ  ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ  ಸೂಚನೆ

ರೌಡಿಸಂ ಚಟುವಟಿಕೆ  ನಿಗ್ರಹಕ್ಕೆ  ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ  ಸೂಚನೆ ಶಿವಮೊಗ್ಗ : , ಅಕ್ಟೋಬರ್ 10: ‘ರೌಡಿಸಂ ಚಟುವಟಿಕೆ ಮಟ್ಟ ಹಾಕಬೇಕು. ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವ ರೌಡಿ ಆಸಾಮಿಗಳ ವಿರುದ್ದ ಕ್ರಮಕೈಗೊಳ್ಳಬೇಕು’ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಉಪ ವಿಭಾಗಗಳ ಡಿವೈಎಸ್ಪಿ, ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಗಳೊಂದಿಗೆ ನಡೆಸಿದ ಅಪರಾಧ ವಿಮರ್ಶನಾ ಸಭೆಯ ಅಧ್ಯಕ್ಷತೆವಹಿಸಿ…

Read More

ಬಸ್ ಹತ್ತುವಾಗ ಮಹಿಳೆಯ ಸರ ಅಪಹರಣ

ಬಸ್ ಹತ್ತುವಾಗ ಮಹಿಳೆಯ ಸರ ಅಪಹರಣ ಶಿವಮೊಗ್ಗ: ತಮ್ಮ ಮಗಳನ್ನು ಭೇಟಿಯಾಗಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದ ಶಿವಮೊಗ್ಗದ 63 ವರ್ಷದ ವೃದ್ಧೆ ಯೊಬ್ಬರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಮಾಂಗಲ್ಯ ಸರ ಕಳೆದುಕೊಂಡಿರುವ ಘಟನೆ ನಡೆದಿದೆ. ಪ್ರಯಾಣಕ್ಕಾಗಿ ಬಸ್ ಹತ್ತುತ್ತಿದ್ದಾಗ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಇತ್ತು. ಜನದಟ್ಟಣೆಯ ಮಧ್ಯೆ ಬಸ್‌ನಲ್ಲಿ ಸೀಟು ಹಿಡಿಯಲು ಮುಂದಾಗಿದ್ದ ವೃದ್ಧೆಯ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಬಸ್‌ನಲ್ಲಿ ಸೀಟು ಹಿಡಿದ ಬಳಿಕ ರಾತ್ರಿ…

Read More

ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವೃದ್ದ ಸಾವು

ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವೃದ್ದ ಸಾವು ಜಾನುವಾರುಗಳಿಗೆ ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ. ಹುಚ್ಚನಾಯಕ್(65) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ತಮ್ಮ ಹಸುಗಳಿಗೆ ಮೇವು ತರಲು ಗದ್ದೆಗೆ ತೆರಳಿದ್ದ ಅವರು ಹುಲ್ಲು ಕೊಯ್ಯುವಾಗ ಕಾಲಿಗೆ ವಿಷಪೂರಿತ ಹಾವು ಕಚ್ಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬೆಂಗಳೂರು: ಸಾಹಿತಿಗಳಾದ ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್‌ ಸಹಿತ ಐವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ 2024 ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಚಾಮರಾಜನಗರದ ಡಾ.ಎಂ.ಬಸವಣ್ಣ, ಬೆಂಗಳೂರಿನ ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್, ಕಲಬುರಗಿಯ ಡಾ.ಡಿ.ಬಿ.ನಾಯಕ್, ಮುಂಬೈಯ ಡಾ.ವಿಶ್ವನಾಥ ಕಾರ್ನಾಡ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು. ಸಾಹಿತ್ಯಶ್ರೀ ಪ್ರಶಸ್ತಿಗೆ ಚಿಕ್ಕಮಗಳೂರಿನ ಡಾ.ಬಿ.ಎಂಪುಟ್ಟಯ್ಯ, ಬೆಂಗಳೂರು ಡಾ.ಕೆ.ವೈ. ನಾರಾಯಣಸ್ವಾಮಿ, ಕೋಲಾರದ ಪದ್ಮಾಲಯ ನಾಗರಾಜ್, ತುಮಕೂರಿನ ಬಿ.ಯು.ಸುಮಾ,…

Read More

ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ

ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ ರಿಪ್ಪನಪೇಟೆ, 9 ಅಕ್ಟೋಬರ್  2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭಿಸಿರುವುದಾಗಿ, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳರು ಘೋಷಿಸಿದ್ದಾರೆ.   ಈ ಮೂಲಕ  ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ  ಲಭ್ಯವಾಗುವಂತೆ ಮಾಡುವ ಧ್ಯೇಯವನ್ನು ಹೊಂದಿದ್ದ…

Read More

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಮುರುಳಿಧರ್ ಕೆರೆಹಳ್ಳಿ ಆಯ್ಕೆ

ರಿಪ್ಪನ್‌ಪೇಟೆ : 32ನೇ ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ಮುರುಳಿ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಬಳೆಗಾರ್ ಆಯ್ಕೆಯಾಗಿದ್ದಾರೆ. ಕಳೆದ ಸಾಲಿನ ಅಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಲಾ ಕೌಸ್ತುಭ ಕನ್ನಡ ಸಂಘ 32ನೇ ವರ್ಷದ ವಾರ್ಷಿಕೋತ್ಸವ ಮತ್ತು 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬರುವ ನವೆಂಬರ್…

Read More

ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ

ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವಕನೋರ್ವನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಅಜ್ಗರ್ ಖಾನ್ (21) ಶಿಕ್ಷೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಅಪರಾಧಿಗೆ  ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂ. ದಂಡ ಕೂಡ ನ್ಯಾಯಾಲಯ ವಿಧಿಸಿದೆ. ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು 8-10-2025 ರಂದು ಈ…

Read More

ಕೋಣಂದೂರು – ಹಾವು ಕಡಿದು ವೃದ್ಧೆ ಸಾವು

ಕೋಣಂದೂರಿನಲ್ಲಿ ದಾರುಣ ಘಟನೆ: ಹಾವು ಕಡಿದು ವೃದ್ಧೆ ಸಾವು ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಆಲಸೆ ಗ್ರಾಮದಲ್ಲಿ ನಡೆದ ಹಾವು ಕಡಿತದ ಘಟನೆ ದಾರುಣ ಅಂತ್ಯ ಕಂಡಿದೆ. ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವು ಜಾನಕಮ್ಮ (85) ಎಂಬ ವೃದ್ಧೆಯನ್ನು ಕಡಿದ ಪರಿಣಾಮ, ಅವರು ಮೃತಪಟ್ಟಿದ್ದಾರೆ. ಘಟನೆಯ ನಂತರ ಆತಂಕಗೊಂಡ ಸ್ಥಳೀಯರು ತಕ್ಷಣ ಜಾನಕಮ್ಮ ಅವರನ್ನು ಹೊತ್ತು ಗೌರಿ ಹೊಳೆ ದಾಟಿ ನಡೆದುಕೊಂಡೇ ಕೋಣಂದೂರು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ,…

Read More

ರಿಪ್ಪನ್ ಪೇಟೆ ಸುತ್ತಮುತ್ತ ಭೂಮಿ ಹುಣ್ಣಿಮೆ ಸಂಭ್ರಮ – ಹರತಾಳು ಹಾಲಪ್ಪ ಕುಟುಂಬದಿಂದ ಭೂಮಿ ಪೂಜೆ

ರಿಪ್ಪನ್ ಪೇಟೆ ಸುತ್ತಮುತ್ತ ಭೂಮಿ ಹುಣ್ಣಿಮೆ ಸಂಭ್ರಮ –ಹರತಾಳು ಹಾಲಪ್ಪ ಕುಟುಂಬದಿಂದ ಭೂಮಿ ಪೂಜೆ ರಿಪ್ಪನ್ ಪೇಟೆ : ಪ್ರಕೃತಿಯೊಡನೆ ಮಾನವನ ನಂಟನ್ನು ಪ್ರತಿಬಿಂಬಿಸುವ, ಕೃಷಿಕ ಜೀವನಶೈಲಿಯ ಹೃದಯಸ್ಪರ್ಶಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಭೂಮಿ ಹುಣ್ಣಿಮೆ ರಿಪ್ಪನ್ ಪೇಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಕ್ತಿಭಾವ– ಸಂಭ್ರಮ – ಸಡಗರಗಳಿಂದ ಆಚರಿಸಲಾಯಿತು. ಬೆಳಗಿನ ಜಾವ ಗ್ರಾಮೀಣರು ಹೊಲ–ಗದ್ದೆ, ತೋಟಗಳಲ್ಲಿ ಹೊಸ ತಳಿರು ತೋರಣಗಳಿಂದ ಅಲಂಕರಿಸಿ ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ಮಣ್ಣಿನ ಪರಿಮಳ, ತೆನೆಗಳ ಹೊಳಪು, ಮಳೆಯ ಹನಿಗಳ ಸಮಾಗಮ…

Read More

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಹಾವೇರಿ ಡಿಎಸ್ ಬಿ ಘಟಕದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ಗೌಡಪ್ಪಗೌಡರ್  ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗುರಣ್ಣ ಹೆಬ್ಬಾಳ್ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಗುರಣ್ಣ ಹೆಬ್ಬಾಳ್ ರವರು ಬೆಂಗಳೂರಿನ‌ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಅಗಸ್ಟ್ 2023 ರಿಂದ ಹೊಸನಗರದ ಸರ್ಕಲ್ ಇನ್ಸ್…

Read More