ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ
ರಿಪ್ಪನ್ಪೇಟೆ: ಪಟ್ಟಣದಲ್ಲಿ ವಿಜಯವಾಣಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಸ್ವಾಮಿ ಅವರ ತಾಯಿ ಮುರಿಗೆಮ್ಮ (85) ಅವರು ನಿಧನರಾಗಿದ್ದಾರೆ.
ಶಿವಮೊಗ್ಗ ರಸ್ತೆಯ ನಿವಾಸಿಗಿದ್ದ ದಿ. ಗುರುಪಾದಯ್ಯರವರ ಧರ್ಮಪತ್ನಿ ಹಾಗೂ ಪತ್ರಕರ್ತ ಚಿದಾನಂದ ಸ್ವಾಮಿಯವರ ತಾಯಿ ಮುರಿಗೆಮ್ಮ (85) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರು ಭಾನುವಾರ ಸಂಜೆ ತಮ್ಮ ಸ್ವಗೃಹದಲ್ಲಿ ಲಿಂಗೈಕ್ಯರಾದರು.
ಮೃತರು ಪುತ್ರರು, ಸೊಸೆ, ಮಕ್ಕಳು , ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಸಂತಾಪ :
ಅಲ್ಪಕಾಲದ ಅನಾರೋಗ್ಯದಿಂದ ಲಿಂಗೈಕ್ಯರಾದ ಮುರಿಗೆಮ್ಮ ರವರ ನಿಧನಕ್ಕೆ ರಿಪ್ಪನ್ಪೇಟೆ ಪತ್ರಕರ್ತರ ಒಕ್ಕೂಟ ಹಾಗೂ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಸಂತಾಪವನ್ನು ಸೂಚಿಸುತ್ತದೆ.