



ಕಪ್ಪು ಆಮೆ ಅಕ್ರಮ ಸಂಗ್ರಹ – ಅರಣ್ಯ ಸಂಚಾರಿ ದಳದಿಂದ ದಿಢೀರ್ ದಾಳಿ, ಓರ್ವನ ಬಂಧನ
ಶಿವಮೊಗ್ಗ : ಅಕ್ರಮವಾಗಿ ಕಪ್ಪು ಆಮೆ ಸಂಗ್ರಹಿಸಿಟ್ಟುಕೊಂಡಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಅರಣ್ಯ ಸಂಚಾರಿ ದಳ ಸಾಗರದ ಪಿಎಸ್‌ಐ ವಿನಾಯಕ ಅವರ ನೇತೃತ್ವದಲ್ಲಿ ಸಿಬ್ಬಂದಿವರ್ಗ ದಿಢೀರ್ ದಾಳಿ ನಡೆಸಿ, ಕಪ್ಪು ಆಮೆಯನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಬೆಕಲ್ಲು ಸಿದ್ದೇಶ್ವರ ನಗರದಲ್ಲಿನ ಮನೆಯೊಂದರಲ್ಲಿ ಕಪ್ಪು ಆಮೆ ಇಟ್ಟುಕೊಂಡಿದ್ದ ಮಹಮ್ಮದ್ ಸಮೀಯುಲ್ಲಾ ಬಿನ್ ಹಮೀದ್ ಎಂಬುವವರನ್ನು ಬಂಧಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Illegal collection of black turtles – sudden raid by forest patrol team, one arrested