Headlines

ನೇಣಿಗೆ ಕೊರಳೊಡ್ಡಲು ಮುಂದಾದ ವ್ಯಕ್ತಿ | ವೀಡಿಯೋ ಕಾಲ್ ನಲ್ಲಿ ಆತ್ಮ*ಹತ್ಯೆ ಬಗ್ಗೆ ಮಾಹಿತಿ | ಅಷ್ಟರಲ್ಲಿ ಮನೆಗೆ ಬಂದ ಪೊಲೀಸ್‌, ಆಗಿದ್ದೇನು?

ಫ್ಯಾನಿಗೆ ಕೊರಳೊಡ್ಡಲು ಮುಂದಾದ ವ್ಯಕ್ತಿ | ವೀಡಿಯೋ ಕಾಲ್ ನಲ್ಲಿ ಆತ್ಮ*ಹತ್ಯೆ ಬಗ್ಗೆ ಮಾಹಿತಿ | ಅಷ್ಟರಲ್ಲಿ ಮನೆಗೆ ಬಂದ ಪೊಲೀಸ್‌, ಆಗಿದ್ದೇನು?

ಶಿವಮೊಗ್ಗ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳುವುದಾಗಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್‌ನಲ್ಲಿ ತಿಳಿಸಿದ್ದರು.

ಈ ಕುರಿತು ಮಾಹಿತಿ ಪಡೆದ 112 ಇಆರ್‌ಎಸ್‌ಎಸ್‌ ಸಿಬ್ಬಂದಿ ಜಗದೀಶ್ ಮತ್ತು ಚಾಲಕ ಮಂಜುನಾಥ್ ಕೂಡಲೆ ಆಲ್ಕೊಳ ಬಡಾವಣೆಯಲ್ಲಿರುವ ಮನೆಯತ್ತ ದೌಡಾಯಿಸಿದರು. ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಮಾಧಾನಪಡೆಸಿ ಮನವೊಲಿಸಲು ಯತ್ನಿಸಿ, ಕೊನೆಗೆ ಅವನನ್ನು ಸುರಕ್ಷಿತವಾಗಿ ರಕ್ಷಿಸಿದರು.

ತದನಂತರ ತುಂಗಾನಗರ ಠಾಣೆಯ ಸಿಬ್ಬಂದಿ ಪ್ರಭು ಮತ್ತು ಕಿರಣ್ ಕೂಡ ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯೊಂದಿಗೆ ಮಾತನಾಡಿ ಸ್ಥಿತಿಗತಿಗಳನ್ನು ಸಮತೋಲನಕ್ಕೆ ತಂದರು.ಪೊಲೀಸರು ತಕ್ಷಣ ಕ್ರಮ ಕೈಗೊಂಡು ಒಂದು ಅಮೂಲ್ಯ ಜೀವ ಉಳಿಸಿರುವುದಕ್ಕೆ ಸಾರ್ವಜನಿಕರು ಪ್ರಶಂಸೆಯ ನುಡಿಗಳನ್ನಾಡಿದ್ದಾರೆ.

POSTMAN NEWS ಮನವಿ: ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ, ಅದಕ್ಕೆ ಶಾಶ್ವತ ಪರಿಹಾರವಿಲ್ಲ ಎಂಬ ನಂಬಿಕೆ ಕಳೆದುಕೊಳ್ಳಬೇಡಿ. ಸಹಾಯ ಬೇಕಾದರೆ ಈ ನಂಬರನ್ನು ಸಂಪರ್ಕಿಸಿ – ಆತ್ಮಹತ್ಯೆ ತಡೆಗಟ್ಟುವ ಸಲಹಾ ಸಹಾಯವಾಣಿ: 9152987821 (ಸಹಾಯ) / 1800-599-0019 (ಸ್ನೇಹ).