ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವೈದ್ಯೆ ಗೆ 1 ಕೋಟಿ 81 ಲಕ್ಷ ರೂ ವಂಚನೆ
ಶಿವಮೊಗ್ಗ : ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ ವೈದ್ಯೆ ಗೆ 1 ಕೋಟಿ 81 ಲಕ್ಷದ 33 ಸಾವಿರದ 770 ರೂಗಳ ಮೋಸ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ ವೈದ್ಯೆ ಒಬ್ಬರಿಗೆ ಒಬ್ಬ ಅಪರಿಚಿತ ವ್ಯಕ್ತಿ ದಿನಾಂಕ 26/4 /2025 ರಂದು ಕರೆ ಮಾಡಿ ನಾವು ಬುಲ್ ಮಾರ್ಕೆಟ್ ಎಂಬ ಕಂಪನಿ ನಡೆಸುತ್ತಿದ್ದು ಸದರಿ ಕಂಪನಿಯ ವೆಬ್ಸೈಟ್ ನಲ್ಲಿ ಷೇರ್ ಮೂಲಕ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ತಿಳಿಸುತ್ತಾನೆ.
ಇದನ್ನು ನಂಬಿದ ವೈದ್ಯೆ ಅವರು ತಿಳಿಸಿದ ವೆಬ್ಸೈಟ್ ಗೆ https://www.bullmarkets.com ನಲ್ಲಿ ವೈದ್ಯೆ ತನ್ನ ಹೆಸರಿನಲ್ಲಿ ಲಾಗಿನ್ ಆಗಿದ್ದರು.ನಂತರ ಅವರು ಟೆಲಿಗ್ರಾಂ ಆಪ್ ಮುಖಾಂತರ Bull markets app bot ಎಂಬ ಖಾತೆ ಮೂಲಕ ಅವರ ಟೆಲಿಗ್ರಾಂ ಖಾತೆಗೆ ಮೆಸೇಜ್ ಮಾಡಿ ಅವರು ಹೇಳಿದಂತೆ ಮೊದಲಿಗೆ 1090 ರೂಗಳನ್ನು ಹಾಗೂ 430 ರೂಗಳನ್ನು ಇನ್ವೆಸ್ಟ್ ಮಾಡಿದ್ದು ನಂತರ ಒಂದು ತಿಂಗಳ ನಂತರ Bull markets ಖಾತೆಯಲ್ಲಿ ಇವರು ಹಾಕಿದ ಇನ್ವೆಸ್ಟ್ಮೆಂಟಿಗೆ ಲಾಭಾಂಶ ಬಂದಿದೆ ನೋಡಿ ಎಂದು ತೋರಿಸುತ್ತಾರೆ. ನಂತರ ಅವರು ವಿವಿಧ ನಂಬರ್ ಗಳಿಂದ ಕರೆ ಮಾಡಿ ಹೆಚ್ಚಿನ ಹಣ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸುತ್ತಾರೆ .ಅದನ್ನೇ ನಂಬಿದ ಇವರು ವಿವಿಧ ಹಂತಗಳಲ್ಲಿ ವಿವಿಧ ಖಾತೆಗಳಿಗೆ ಸುಮಾರು 1 ಕೋಟಿ 81,33,770 ರೂಗಳನ್ನು ಜಮಾ ಮಾಡಿದ್ದರು.
ಆದರೆ ಹೀಗೆ ಇಷ್ಟೆಲ್ಲಾ ಹಣ ಹಾಕಿದರು ಕೂಡ ಬುಲ್ ಮಾರ್ಕೆಟ್ಸ್್ ನಲ್ಲಿ ಹಣ ವಿತ್ ಡ್ರಾ ಮಾಡಲು 50,000 ರೂಗಳನ್ನು ಪಾವತಿಸುವಂತೆ ತಿಳಿಸಿದ್ದರು.ತ್ಳ ಇದರಿಂದ ಅನುಮಾನ ಗೊಂಡ ವೈದ್ಯೆ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅವರ ಸ್ನೇಹಿತರು ನಿನಗೆ ಮೋಸವಾಗಿದೆ. ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ . ಈ ಬಗ್ಗೆ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡು ಎಂದು ಹೇಳಿದ್ದರು.
ಎಚ್ಚೆತ್ತುಕೊಂಡ ವೈದ್ಯೆ ಸದರಿ ನಂಬರ್ ಗಳು ಹಾಗೂ ಅಕೌಂಟಿಗೆ ಹಾಕಿದ ಹಣದ ಡೀಟೇಲ್ಸ್ ಇಟ್ಟುಕೊಂಡು ಪೊಲೀಸ್ ಠಾಣೆಗೆ ತನ್ನ ಹಣ ಹಿಂದಿರುಗಿಸಿ ಕೊಡುವಂತೆ ದೂರು ನೀಡಿದ್ದಾರೆ. ಸದರಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.