Headlines

ಮೊಬೈಲ್ ನಂಬರ್ ಹ್ಯಾಕ್ ಮಾಡಿ ಸಾವಿರಾರು ರೂ. ವಂಚನೆ

ಮೊಬೈಲ್ ನಂಬರ್ ಹ್ಯಾಕ್ ಮಾಡಿ ಸಾವಿರಾರು ರೂ. ವಂಚನೆ

ಶಿವಮೊಗ್ಗ : ವ್ಯಕ್ತಿಯೋರ್ವರ ಮೊಬೈಲ್ ಪೋನ್ ನಂಬರ್ ಹ್ಯಾಕ್ ಮಾಡಿ, ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ವಂಚನೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗದ ವೆಂಕಟೇಶ ನಗರದ ನಿವಾಸಿ ಪ್ರಭಾಕರ ಬಿ ವಿ (47) ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದೂರುದಾರ ಪ್ರಭಾಕರ ಬಿ ವಿ ಅವರ ಪೋನ್ ಪೇ ಸ್ಕ್ಯಾನರ್’ಗೆ 27-06-2025 ರ ನಂತರ ಹಣ ಪಾವತಿಯಾಗುತ್ತಿರಲಿಲ್ಲ. ಈ ನಡುವೆ 29-06-2025 ರಂದು ಅವರ ಮೊಬೈಲ್ ನಂಬರ್ ರಿಜಿಸ್ಟ್ರೇಷನ್ ನಾಟ್ ನೆಟ್ ವರ್ಕ್ ಎಂದು ಬಂದಿದೆ
ಪ್ರಭಾಕರ್ ಅವರು ಬ್ಯಾಂಕ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಯಾರೋ ಅಪರಿಚಿತರು ಮೊಬೈಲ್ ನಂಬರ್  ಹ್ಯಾಕ್ ಮಾಡಿರುವ ಸಂಗತಿ ಗೊತ್ತಾಗಿದೆ. ಜೊತೆಗೆ ಅವರ ಬ್ಯಾಂಕ್ ಖಾತೆಯಿಂದ 29-06-2025 ರಿಂದ ಒಟ್ಟು 90,599 ರೂ. ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಮ್ಮ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ವಂಚಿಸಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಹಣವನ್ನು ವಾಪಸ್ ಕೊಡಿಸುವಂತೆ ಪ್ರಭಾಕರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.