Headlines

ಹೊಸನಗರ | ಅಬ್ಬಿ ಫಾಲ್ಸ್ ನಲ್ಲಿ ನೀರುಪಾಲಾದ ಬೆಂಗಳೂರಿನ ಯುವಕ – ವೀಡಿಯೋ ವೈರಲ್

ಹೊಸನಗರ | ಅಬ್ಬಿ ಫಾಲ್ಸ್ ನಲ್ಲಿ ನೀರು ಪಾಲಾದ ಯುವಕ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ. ರಮೇಶ್ ಅವರ ಪತ್ತೆಗೆ ಪರಿಶ್ರಮ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

ಹೊಸನಗರ: ತಾಲೂಕಿನ ಮಾಸ್ತಿಕಟ್ಟೆ ಸಮೀಪದ ಯಡೂರು ಅಬ್ಬಿ ಜಲಪಾತದಲ್ಲಿ ಈಜಲು ಹೋಗಿದ್ದ ಯುವಕನೋರ್ವ ನೀರು ಪಾಲಾಗಿರುವ ದುರ್ಘಟನೆ ಶನಿವಾರ ನಡೆದಿದೆ.

ಬೆಂಗಳೂರಿನ ನಾಗರಭಾವಿಯಿಂದ ಬಂದಿದ್ದ ಖಾಸಗಿ ಕಂಪನಿಯ ಮ್ಯಾನೇಜರ್ ರಮೇಶ್ ಅವರು ಪ್ರವಾಸಕ್ಕಾಗಿ ಗೆಳೆಯರೊಂದಿಗೆ ಅಬ್ಬಿ ಫಾಲ್ಸ್ ಗೆ ಬಂದಿದ್ದರು. ಈ ವೇಳೆ ಜಲಪಾತದಲ್ಲಿ ಈಜಲು ಇಳಿದಿದ್ದ ಅವರು ಅಚಾನಕ್ ಕಾಲುಜಾರಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ. ರಮೇಶ್ ಅವರ ಪತ್ತೆಗೆ ಪರಿಶ್ರಮ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.