January 11, 2026

ಅಕ್ರಮ‌ ಮರಳು ಸಾಗಾಟ: 10 ಟ್ರ್ಯಾಕ್ಟರ್, ಜೆಸಿಬಿ, ಲಾರಿ ವಶಕ್ಕೆ!

ಅಕ್ರಮ‌ ಮರಳು ಸಾಗಾಟ: 10 ಟ್ರ್ಯಾಕ್ಟರ್, ಜೆಸಿಬಿ, ಲಾರಿ ವಶಕ್ಕೆ!

ಶಿವಮೊಗ್ಗ : ಅಕ್ರಮ ಮರಳು ಸಾಗಾಟ ನಡೆಸುತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 10 ಟ್ರ್ಯಾಕ್ಟರ್  ಜೆಸಿಬಿ ಹಾಗೂ ಲಾರಿಯನ್ನು ವಶಕ್ಕೆ ಪಡೆದ ಘಟನೆ ಹಾಡೊನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇಂದು ಮುಂಜಾನೆ ಎಸಿ ಸತ್ಯನಾರಾಯಣ ನೇತೃತ್ವದಲ್ಲಿ ಹಾಡೋನಹಳ್ಳಿ ಆಕ್ರಮ ಮರಳು ದಂಧೆಯ ಮೇಲೆ ದಾಳಿ ಮಾಡಿದ್ದು ಈ ದಾಳಿಯ ವೇಳೆ ಸುಮಾರು 10 ಜೆಸಿಬಿ ಲಾರಿ, ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಸ್ಥಳದಲ್ಲಿದ್ದವು.

ಆದರೆ ಸಿಬ್ಬಂದಿಗಳು ಕಡಿಮೆ ಇದ್ದರಿಂದ ದಾಳಿಯ ವೇಳೆ ಕೆಲವು ಜೆಸಿಬಿ , ಟ್ರ್ಯಾಕ್ಟರ್, ಲಾರಿಗಳು ತಪ್ಪಿಸಿಕೊಂಡಿದ್ದು ಹಲವು ವೆಹಿಕಲ್ ಗಳಿಗೆ ನಂಬರ್ ಗಳಿಲ್ಲದಿರುವುದೇ ದುರಂತ.
ಈ ದಾಳಿಯ ವೇಳೆ ಎಸಿ ನೇತೃತ್ವದ ತಂಡ ನಾಲ್ಕು ಜೆಸಿಬಿ, ಎಂಟು ಟ್ಯಾಕ್ಟರ್ ಗಳನ್ನು ಪಶಪಡಿಸಿಕೊಂಡು ಮೂರು ಲಕ್ಷದ ಅರವತ್ತು ಸಾವಿರ ದಂಡವನ್ನು ಸ್ಥಳದಲ್ಲೇ ವಿಧಿಸಿದ್ದಾರೆ.

ಈ ದಾಳಿಯಲ್ಲಿ ಎಸಿ ಸತ್ಯನಾರಾಯಣ, ತಹಸೀಲ್ದಾರ್ ರಾಜೀವ್, ಆರ್ ಐ ಮಹಾರುದ್ರಪ್ಪ, ಹಾಗೂ ಅಧಿಕಾರಿಗಳು ಇದ್ದರು.

About The Author

Leave a Reply

Your email address will not be published. Required fields are marked *