ಕಾಂಗ್ರೆಸ್ ಸೇರ್ಪಡೆ ಆಗುವಂತೆ ಜೆಡಿಎಸ್ ಶಾಸಕಿಗೆ ಮಧು ಬಂಗಾರಪ್ಪ ಓಪನ್ ಆಫರ್.!
ಶಿವಮೊಗ್ಗ : ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಓಪನ್ ಆಫರ್ ಅನ್ನು ನೀಡಿದ್ದಾರೆ.
ಪುರದಾಳು ಗ್ರಾಮದ ಬಾರೆಹಳ್ಳ ಮತ್ತು ಹಾಯ್ಹೊಳೆ ಕೆರೆಗಳ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುರದಾಳು ಗ್ರಾಮ ಸರ್ಕಾರಿ ಶಾಲೆಯಲ್ಲಿ ಭಾಷಣದಲ್ಲಿ ಅವರು ಮಾತನಾಡಿ ಚುನಾವಣೆ ಬಂದಾಗ ನಮಗೆ ಕಷ್ಟ ಆಗುತ್ತದೆ. ಅದಕ್ಕೆ ಶಾರದಕ್ಕನವರಿಗೆ ಹೇಳೋದು, ನೀವಾದ್ರೂ ಬನ್ನಿ, ಇಲ್ಲ ನಾನಾದ್ರೂ ಬರುತ್ತೇನೆ. ಈಗ ಅಧಿಕಾರ ನನ್ನ ಬಳಿ ಇರುವುದರಿಂದ ನಾನು ಸದ್ಯಕ್ಕೆ ಬರೋದಕ್ಕೆ ಆಗಲ್ಲ. ಈಗ ನಾನು ಬಂದು ವೋಟು ಕೇಳೋದು ಕಷ್ಟ ಆಗುತ್ತದೆ. ಜನರಿಗೂ ಸಹ ವೋಟ್ ಹಾಕುವಾಗ ನನಗೆ ಕೇಳಬೇಕೋ ಅಥವಾ ಶಾರದಕ್ಕನಿಗೆ ಕೇಳಬೇಕೋ ಎಂಬ ಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ನೀವೆಲ್ಲಾ ಅವರ ಮನೆಗೆ ಹೋಗಿ ಪ್ರತಿಭಟನೆ ಮಾಡಿ ಎಂದು ತಮಾಷೆಯಾಗಿ ಹೇಳಿದರು.
ಯಾವಾಗ್ಲೂ ಬುದ್ಧಿವಂತಿಕೆ ಹೇಗೆ ಇರಬೇಕು ಅಂದ್ರೆ ಅಂತ ತಮ್ಮ ತಂದೆ ಹೇಳುತ್ತಿದ್ದ ಇಂಗ್ಲಿಷ್ನ ಗಾದೆ ಮಾತನ್ನು ಹೇಳಿದರು. ‘ಮೇಕ್ ಎ ವೈಲ್ ಸನ್ಶೈನ್’ ಎಂದ್ರೆ ಏನು ಅಂತ ನೆರೆದಿದ್ದವರನ್ನು ಕೇಳಿದ್ರು. ಯಾರೂ ಉತ್ತರ ಹೇಳದೆ ಹೋದಾಗ ಮೇಕ್ ಎ ವೈಲ್ ಸನ್ಶೈನ್ ಅಂದ್ರೆ ಬಿಸಿಲಿದ್ದಾಗ ಒಣಗಿಸಿಕೊಳ್ಳಬೇಕು. ಅಕ್ಕ ಬಿಸಿಲಿದೆ, ತೀರ್ಮಾನ ಮಾಡಿ ಎಂದರು.
ಗ್ರಾಮದಲ್ಲಿ ದೇವಾಲಯಗಳನ್ನು ದೊಡ್ಡದಾಗಿ ಕಟ್ಟಬೇಡಿ, ಶಾಲೆಗಳನ್ನು ದೊಡ್ಡದಾಗಿ ಕಟ್ಟಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟರೆ ದೇವರು ನಿಮಗೆ ನೂರಕ್ಕೆ ನೂರರಷ್ಟು ಪ್ರಸಾದವನ್ನ ಕೊಡುತ್ತಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟರೆ ಆ ಮಕ್ಕಳು ರಾಜ್ಯ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎಂದು ಶಿಕ್ಷಣ ಸಚಿವರು ಹೇಳಿದರು.















Leave a Reply