ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆ – ಶಾಸಕರಿಂದ ಅಭಿನಂದನೆ
ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಪ್ಪನ್‌ಪೇಟೆ ಸಮೀಪದ ಮಳವಳ್ಳಿ ಗ್ರಾಮದ ವಿಜಯ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಆನ್ಲೈನ್ ನಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವಿಜಯ್ ಮಳವಳ್ಳಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ತಮ್ಮ ಸ್ವಗೃಹದಲ್ಲಿ ಅಭಿನಂದಿಸಿ ಶುಭಾಶಯ ಕೋರಿದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.