RIPPONPETE | ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ವಶಕ್ಕೆ

RIPPONPETE | ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ವಶಕ್ಕೆ

ರಿಪ್ಪನ್‌ಪೇಟೆ : ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ದಾಳಿ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದ ಘಟನೆ ಕೋಡೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ.

ಕೋಳಿ ಅಂಕದಲ್ಲಿ ನಿರತರಾಗಿದ್ದ ರಮೇಶ್, ಶೇಷಗಿರಿ , ಹರೀಶ್ , ಚಂದ್ರಪ್ಪ ,ಯುವರಾಜ್ ಎಂಬಾತನನ್ನು  ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಕೋಡೂರು ಗ್ರಾಪಂ ವ್ಯಾಪ್ತಿಯ ಕೋಟೆಕೆರೆ ಗ್ರಾಮದ ಕಾಡಿನಲ್ಲಿ  ಕೋಳಿ ಅಂಕ ಆಡುತಿದ್ದಾಗ ದಾಳಿ ನಡೆಸಿದ ಪೊಲೀಸರು ಅಂಕದಲ್ಲಿದ್ದ ನಗದು ರೂಪಾಯಿ 400/-, 6 ಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ.

ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ಚೆನ್ನಪ್ಪ ಹಾಗೂ ಮಧುಸೂಧನ್ ಇದ್ದರು.

Leave a Reply

Your email address will not be published. Required fields are marked *