ಬಡ್ಡಿ ಕಿರುಕುಳ – ಮಹಿಳೆಯನ್ನು ವಶಕ್ಕೆ ಪಡೆದ ರಿಪ್ಪನ್‌ಪೇಟೆ ಪೊಲೀಸರು
ರಿಪ್ಪನ್‌ಪೇಟೆ : ಸಾಲಕ್ಕೆ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ಹಾಗೂ ಜೀವ ಬೆದರಿಕೆ ಒಡ್ಡುತಿದ್ದ ಮಹಿಳೆಯೊಬ್ಬಳನ್ನು ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜೇನಿ ಗ್ರಾಮದ ಶ್ರುತಿ ಬಂಧಿತ ಆರೋಪಿಯಾಗಿದ್ದಾರೆ.
ಚಿಕ್ಕಜೇನಿ ನಿವಾಸಿ ಪೂಜಾಶ್ರೀ ಎಂಬುವವರು ಶ್ರುತಿ ಎಂಬುವರಿಂದ ₹50 ಸಾವಿರ ಕೈ ಸಾಲ ಮಾಡಿದ್ದರು. ಇದಕ್ಕೆ ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದರು.ಹಾಗೇಯೆ ಇತ್ತೀಚೆಗೆ ಅಸಲು ಹಣವನ್ನು ಸಹ ತೀರಿಸಿದ್ದರು.ಆದರೆ ಅಷ್ಟಕ್ಕೆ ಸುಮ್ಮನಾಗದ ಮಹಿಳೆ ಯುವತಿಯ ಮನೆಗೆ ಆಗಾಗ ತೆರಳಿ ಕಿರುಕುಳ ನೀಡುತಿದ್ದರು.
15/02/2025 ರಂದು ಪೂಜಾಶ್ರೀ ರವರು ಮನೆಗೆ ತೆರಳುತಿದ್ದಾಗ ಅಡ್ಡಗಟ್ಟಿದ್ದ ಶ್ರುತಿ ಅವಾಚ್ಯವಾಗಿ ನಿಂದಿಸಿ ,ಹಲ್ಲೆ ಮಾಡಿ ಹಣ ನೀಡದೇ ಇದ್ದರೆ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುವ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳ್ಳಗೆ ದಿಡೀರ್ ದಾಳಿ ನಡೆಸಿದ ಪಿಎಸ್‌ಐ ಪ್ರವೀಣ್ ನೇತ್ರತ್ವದ ಸಿಬ್ಬಂದಿಗಳ ತಂಡ ಬಡ್ಡಿ ಕಿರುಕುಳ ನೀಡುತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ಚೆನ್ನಪ್ಪ , ಮಹಿಳಾ ಸಿಬ್ಬಂದಿ ತ್ರಿವೇಣಿ ಮತ್ತು ಮಧುಸೂಧನ್ ಇದ್ದರು.