POSTMAN NEWS

ನೈಜ ಸುದ್ದಿ ನೇರ ಬಿತ್ತರ..

ANANDAPURA | ಸಾಲದ ಬಾಧೆಗೆ ಬೇಸತ್ತು ರೈತ ಮಹಿಳೆ ಆತ್ಮಹತ್ಯೆ

N652646027174004584669820c8ecb6ed5af4f51ad17b8ff2d26aaa59cdb7e4d3a54359fc37d9e59d59c0ae.jpg

ANANDAPURA | ಸಾಲದ ಭಾದೆಗೆ ಬೇಸತ್ತು ರೈತ ಮಹಿಳೆ ಆತ್ಮಹತ್ಯೆ

ಸಾಲದ ಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಫೆ. 18ರ ಮಂಗಳವಾರ ನಡೆದಿದೆ.

ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರುವಕ್ಕಿ ಗ್ರಾಮದ ಯೋಗಮ್ಮ(58) ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ.

ಯೋಗಮ್ಮ ತಮ್ಮ ಹೊಲದಲ್ಲಿ ಬೆಳೆ ಬೆಳೆಯಲು ಕೃಷಿ ಸಾಲವಾಗಿ ಡಿಸಿಸಿ ಬ್ಯಾಂಕ್, ನಂದಿತಳೆ ಸೊಸೈಟಿ ಹಾಗೂ ಎಲ್‌ಐಸಿ ಯಲ್ಲಿ ಒಟ್ಟು 2-3 ಲಕ್ಷ ಸಾಲ ಮಾಡಿದ್ದು, ಮಳೆ ಸರಿಯಾಗಿ ಬಾರದೆ ಬೆಳೆಯಲ್ಲಿ ನಷ್ಟ ಕಂಡುಬಂದಿದೆ.

ಯೇಗಮ್ಮ ಅವರಿಗೆ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.