Headlines

ರಿಪ್ಪನ್‌ಪೇಟೆ : ಹಿರಿಯ ಸಾಹಿತಿ ನಾ ಡಿಸೋಜ ಅಂತಿಮ ದರ್ಶನ ಪಡೆದ ಅಭಿಮಾನಿಗಳು

ರಿಪ್ಪನ್‌ಪೇಟೆ : ಭಾನುವಾರ ಅಸ್ತಂಗತರಾದ ನಾಡಿನ ಹೆಸರಾಂತ ಸಾಹಿತಿ ,‌ಜನಪ್ರಿಯ ಕಾದಂಬರಿಕಾರ ಡಾ.ನಾ ಡಿಸೋಜಾ ಪಾರ್ಥಿವ ಶರೀರವನ್ನು ಪಟ್ಟಣದ ವಿನಾಯಕ ವೃತ್ತದಲ್ಲಿ ಅಭಿಮಾನಿಗಳು, ಹಿತೈಷಿಗಳು, ಅಂತಿಮ ದರ್ಶನ ಪಡೆದರು.

ಮಂಗಳೂರಿನಿಂದ ಸಾಗರಕ್ಕೆ ಪ್ರಾರ್ಥೀವ ಶರೀರ ತೆರಳುತಿದ್ದ ಸಂಧರ್ಭದಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ,ಅಭಿಮಾನಿಗಳು ಹಾಗೂ ಹಿತೈಶಿಗಳು ನಾಡಿನ ಹೆಸರಾಂತ ಸಾಹಿತಿಯ ಅಂತಿಮ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹ ಅ ಪಾಟೀಲ್ ನಾ ಡಿಸೋಜ ಹಾಗೂ ರಿಪ್ಪನ್‌ಪೇಟೆ ಪಟ್ಟಣಕ್ಕೂ ಅವಿನಾಭಾವ ಸಂಬಂಧವಿದ್ದು ಅವರು ನಮ್ಮೂರಿನ ಮಾಣಿಕ್ಯವಾಗಿದ್ದರು , ಅವರು ಸರಳ ಮತ್ತು ಸಾಮಾಜಿಕ ಕಳಕಳಿಯ ಬರಹಗಾರರಾಗಿದ್ದರು. ಕಥಾಸಂಕಲನ,ಕಾದಂಬರಿಗಳನ್ನ ಪ್ರಕಟಿಸಿದ್ದರು. ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಅವರ ಬರಹಗಳು ಜನಮನ ರಂಜಿಸಿದ್ದವು ಎಂದು ಹೇಳಿದರು.

ಪ್ರಾರ್ಥೀವ ಶರೀರ ವಿನಾಯಕ ವೃತ್ತಕ್ಕೆ ಆಗಮಿಸುವುದಕ್ಕಿಂತ ಮುಂಚೆ ಮೃತರ ಆತ್ಮಕ್ಕೆ ಶಾಂತಿ ಕೋರಿ‌ ಮೌನಾಚರಣೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಕಲಾ ಕೌಸ್ಥುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ , ಕಸಾಪ ನಿಕಟ ಪೂರ್ವ ಅಧ್ಯಕ್ಷ ತ ಮ ನರಸಿಂಹ ,ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮುಖಂಡರಾದ ಎನ್ ವರ್ತೇಶ್ , ಎಂ ಬಿ ಮಂಜುನಾಥ್ , ಆಸೀಫ಼್ ಭಾಷಾ , ಸುರೇಶ್ ಸಿಂಗ್ , ಗಣಪತಿ , ಸೋಮನಾಥ್ , ಪಿಯೂಸ್ ರೋಡ್ರಿಗಸ್ , ಶ್ರೀಧರ್ ಹಾಗೂ ಇನ್ನಿತರರಿದ್ದರು.

ರಿಪ್ಪನ್‌ಪೇಟೆ : ಹಿರಿಯ ಸಾಹಿತಿ ನಾ ಡಿಸೋಜ ಅಂತಿಮ ದರ್ಶನ ಪಡೆದ ಅಭಿಮಾನಿಗಳು

ರಿಪ್ಪನ್‌ಪೇಟೆ : ಭಾನುವಾರ ಅಸ್ತಂಗತರಾದ ನಾಡಿನ ಹೆಸರಾಂತ ಸಾಹಿತಿ ,‌ಜನಪ್ರಿಯ ಕಾದಂಬರಿಕಾರ ಡಾ.ನಾ ಡಿಸೋಜಾ ಪಾರ್ಥಿವ ಶರೀರವನ್ನು ಪಟ್ಟಣದ ವಿನಾಯಕ ವೃತ್ತದಲ್ಲಿ ಅಭಿಮಾನಿಗಳು, ಹಿತೈಷಿಗಳು, ಅಂತಿಮ ದರ್ಶನ ಪಡೆದರು.

ಮಂಗಳೂರಿನಿಂದ ಸಾಗರಕ್ಕೆ ಪ್ರಾರ್ಥೀವ ಶರೀರ ತೆರಳುತಿದ್ದ ಸಂಧರ್ಭದಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ,ಅಭಿಮಾನಿಗಳು ಹಾಗೂ ಹಿತೈಶಿಗಳು ನಾಡಿನ ಹೆಸರಾಂತ ಸಾಹಿತಿಯ ಅಂತಿಮ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹ ಅ ಪಾಟೀಲ್ ನಾ ಡಿಸೋಜ ಹಾಗೂ ರಿಪ್ಪನ್‌ಪೇಟೆ ಪಟ್ಟಣಕ್ಕೂ ಅವಿನಾಭಾವ ಸಂಬಂಧವಿದ್ದು ಅವರು ಹಲವಾರು ಕಾರ್ಯಕ್ರಮ ಹಾಗೂ ಹೋರಾಟಗಳಲ್ಲಿ ನಿಸ್ವಾರ್ಥವಾಗಿ ಭಾಗವಹಿಸಿದ್ದರು , ಅವರು ಸರಳ ಮತ್ತು ಸಾಮಾಜಿಕ ಕಳಕಳಿಯ ಬರಹಗಾರರಾಗಿದ್ದರು. ಕಥಾಸಂಕಲನ,ಕಾದಂಬರಿಗಳನ್ನ ಪ್ರಕಟಿಸಿದ್ದರು. ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಅವರ ಬರಹಗಳು ಜನಮನ ರಂಜಿಸಿದ್ದವು ಎಂದು ಹೇಳಿದರು.

ಪ್ರಾರ್ಥೀವ ಶರೀರ ವಿನಾಯಕ ವೃತ್ತಕ್ಕೆ ಆಗಮಿಸುವುದಕ್ಕಿಂತ ಮುಂಚೆ ಮೃತರ ಆತ್ಮಕ್ಕೆ ಶಾಂತಿ ಕೋರಿ‌ ಮೌನಾಚರಣೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ , ಕಲಾ ಕೌಸ್ಥುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ , ಕಸಾಪ ನಿಕಟ ಪೂರ್ವ ಅಧ್ಯಕ್ಷ ತ ಮ ನರಸಿಂಹ ,ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮುಖಂಡರಾದ ಎನ್ ವರ್ತೇಶ್ , ಎಂ ಬಿ ಮಂಜುನಾಥ್ , ಆಸೀಫ಼್ ಭಾಷಾ , ಸುರೇಶ್ ಸಿಂಗ್ , ಗಣಪತಿ , ಸೋಮನಾಥ್ , ಪಿಯೂಸ್ ರೋಡ್ರಿಗಸ್ , ಶ್ರೀಧರ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *