Headlines

Ripponpete | ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕಾಗಿ ಸಮವಸ್ತ್ರ ಕಳಚಿ ಶ್ರಮದಾನಕ್ಕೆ ಮುಂದಾದ ಪೊಲೀಸರು

Ripponpete | ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕಾಗಿ ಸಮವಸ್ತ್ರ ಕಳಚಿ ಶ್ರಮದಾನಕ್ಕೆ ಮುಂದಾದ ಪೊಲೀಸರು ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಸರ್ಕಾರಿ ಶಾಲಾ ಆವರಣದಲ್ಲಿ ಇಂದು ನಡೆದ ಸುಣ್ಣಬಣ್ಣ ಅಭಿಯಾನವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹೌದು… ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪಟ್ಟಣದ ಪೊಲೀಸ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಠಾಣೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಸಮವಸ್ತ್ರ ಕಳಚಿಟ್ಟು ಏಳು ದಶಕಗಳ ಇತಿಹಾಸವಿರುವ ಸರ್ಕಾರಿ ಶಾಲೆಯ ಪುನರ್ ನವೀಕರಣಕ್ಕಾಗಿ ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಭಾಜನರಾಗಿದ್ದಾರೆ. ಪಟ್ಟಣದ…

Read More

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ –

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ – 32 ಜನರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಅರಣ್ಯ ಮತ್ತು ಕೈಗಾರಿಕೆ ಮಂಡಳಿ ಅಧ್ಯಕ್ಷ ಸ್ಥಾನ ದೊರಕಿದೆ. ಗಣರಾಜ್ಯೋತ್ಸವದ ದಿನದಂದೇ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಪ್ರಕಟವಾಗಿದೆ. ಯಾವೆಲ್ಲ ಶಾಸಕರಿಗೆ ಸ್ಥಾನ ಸಿಕ್ಕಿದೆ ಇಲ್ಲಿದೆ ಮಾಹಿತಿ ಬೇಳೂರು ಗೋಪಾಲಕೃಷ್ಣ…

Read More

Accident | ದ್ವಿಚಕ್ರ ವಾಹನ ಡಿಕ್ಕಿ – ಶಾಲೆಗೆ ಹೊರಟಿದ್ದ ಬಾಲಕ ಸಾವು

Accident | ದ್ವಿಚಕ್ರ ವಾಹನ ಡಿಕ್ಕಿ – ಶಾಲೆಗೆ ಹೊರಟಿದ್ದ ಬಾಲಕ ಸಾವು ಶಿವಮೊಗ್ಗ | ಶಾಲಾ (school) ಬಾಲಕನಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯ ಮಲವಗೊಪ್ಪದಲ್ಲಿ ನಡೆದಿದೆ. ನಗರದ ಮಲವಗೊಪ್ಪದಲ್ಲಿ ಚಿರಂತ್ ಎಂಬ ಬಾಲಕ ಖಾಸಗಿ ಶಾಲೆಗೆ ಹೋಗಲು ನಿಗದಿತ ನಿಲ್ದಾಣದ ಕಡೆ ಸಾಗುತ್ತಿದ್ದ ವೇಳೆ ಭದ್ರಾವತಿಯಿಂದ ಬಂದ ಬೈಕ್ ಡಿಕ್ಕಿಹೊಡೆದಿದೆ. ತಕ್ಷಣವೇ ಆತನನ್ನ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಬಾಲಕ ಮಾರ್ಗ ಮಧ್ಯೆಯಲ್ಲಿ ಅಸುನೀಗಿದ್ದಾನೆ. ಶಿವಮೊಗ್ಗದಲ್ಲಿರುವ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಓರ್ವ ಸ್ಥಳದಲ್ಲಿಯೇ ಸಾವು

Accident | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಓರ್ವ ಸ್ಥಳದಲ್ಲಿಯೇ ಸಾವು ಸಿಮೆಂಟ್ ಲಾರಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಸಂಜೆ ಸುಮಾರು 04:30 ಗಂಟೆಯ ಹೊತ್ತಿನಲ್ಲಿ ಸಿಮೆಂಟ್ ಚೀಲಗಳನ್ನೂ ತುಂಬಿದ ಲಾರಿ ವಾಹನ ಸಂಖ್ಯೆಯ KA 15 A 1383 ಲಾರಿಯೂ ಆಕಸ್ಮಿಕವಾಗಿ ಇಡುವಾಣಿ ಸಮೀಪದ ಅಪಾಯಕಾರಿ ತಿರುವಿನಲ್ಲಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ತಾಳಗುಪ್ಪ ಅಂಬೇಡ್ಕರ್ ಕಾಲೋನಿ ನಿವಾಸಿ…

Read More

Hosanagara | ಮರಳು ಅಕ್ರಮ ಸಾಗಾಟ ; ಎರಡು ಟಿಪ್ಪರ್ ವಶ

Hosanagara | ಮರಳು ಅಕ್ರಮ ಸಾಗಾಟ ; ಎರಡು ಟಿಪ್ಪರ್ ವಶ ಹೊಸನಗರ: ಮರಳು ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ವಾಹನ ತಡೆದು ತಪಾಸಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಬಾಣಿಗ ಸಮೀಪದ ಜೋಡಿ ದೇವಸ್ಥಾನದ ಸಮೀಪ ರಾಘವೇಂದ್ರ ಎಂಬುವವರಿಗೆ ಸೇರಿದ ಟಿಪ್ಪರ್ ವಶಕ್ಕೆ ಪಡೆದಿದ್ದು, ಮಾವಿನಕಟ್ಟೆ ಮಾರ್ಗವಾಗಿ ಕೋಡೂರು ಕಡೆಗೆ ವೇಗವಾಗಿ ಸಾಗುತ್ತಿದ್ದ ಟಿಪ್ಪರ್ ಅನ್ನು ಬುಧವಾರ ರಾತ್ರಿ ತಡೆದು ವಶಕ್ಕೆ ಪಡೆಯಲಾಗಿದೆ. ಎಸಿಎಫ್ ಕೆ.ಬಿ.ಮೋಹನ್…

Read More

Thirthahalli | ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತಾರ್ಹ- ಆರಗ ಜ್ಞಾನೇಂದ್ರ

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತರ್ಹ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಜಗದೀಶ್ ಶೆಟ್ಟರ್ ಎಂಬುವವರು ಕಾಂಗ್ರೆಸ್ ಸಂಸ್ಕೃತಿಯನ್ನು  ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗುರುವಾರ ಪಟ್ಟಣದಲ್ಲಿ ಮಾತನಾಡಿ ಜಗದೀಶ್ ಶೆಟ್ಟರ್ ಹುಟ್ಟಿನಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ನಲ್ಲಿ ಬೆಳೆದು ಬಂದವರು, ಎಲ್ಲಾ ಸ್ಥಾನಮಾನಗಳು ಗೌರವಗಳು ಅವರಿಗೆ…

Read More

Hosanagara | ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗದ ಪಾತ್ರ ಹಿರಿದು : ಶಾಸಕ ಬೇಳೂರು ಗೋಪಾಲಕೃಷ್ಣ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗದ ಪಾತ್ರ ಹಿರಿದು : ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ : ಸರ್ಕಾರಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಗೊಳಿಸುವ ಹೊಣೆಗಾರಿಕೆ ಇಲಾಖಾ ನೌಕರರ ಮೇಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಅವರು ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸಿದ್ದನಿದ್ದೇನೆ. ಅವರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತೇನೆ….

Read More

ಅಕ್ರಮವಾಗಿ ಗೋ ಸಾಗಾಟಕ್ಕೆ ಯತ್ನ – ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು | Crime News

ಅಕ್ರಮವಾಗಿ ಗೋ ಸಾಗಾಟಕ್ಕೆ ಯತ್ನ – ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು | Crime News ತೀರ್ಥಹಳ್ಳಿ : ತಾಲೂಕಿನಾದ್ಯಂತ ಗೋಗಳ್ಳರ ಅಟ್ಟಹಾಸ ಮೀತಿ ಮೀರುತ್ತಿದ್ದು ಇತ್ತೀಚಿಗೆ ಸೀಬಿನಕೆರೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಮಲಗಿದ್ದ ಹಸುಗಳನ್ನು ಐಷಾರಾಮಿ ಕಾರಿನಲ್ಲಿ ರಾತ್ರೋ ರಾತ್ರಿ ಕದ್ದೋಯ್ದ ಘಟನೆ  ನಡೆದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು. ಈ ವಿಷಯ ಮಾಸುವ ಮುನ್ನವೇ ಹೆದ್ದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ಹಸುಗಳನ್ನು…

Read More

ಜ.26 ರ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ

ಜ.26 ರ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ ರಿಪ್ಪನ್‌ಪೇಟೆ : ಜನವರಿ 26 ರಂದು ದೆಹಲಿಯ(Delhi) ಕೆಂಪು ಕೋಟೆಯಲ್ಲಿ(Redfort) ನಡೆಯುವ ಗಣರಾಜ್ಯೋತ್ಸವ(republic day) ಧ್ವಜಾರೋಹಣ ಕಾರ್ಯಕ್ರಮದ ಕರ್ತವ್ಯ ಪಥ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಿಪ್ಪನ್‌ಪೇಟೆ(Ripponpete) ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರು ಡೊಳ್ಳು ಕುಣಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ(Karnataka) ಡೊಳ್ಳು ಕುಣಿತ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರಾದ ಕು|| ವಿದ್ಯಾ, ಕು||…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (25-01-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (25-01-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 25/01/24 ರಂದು ಬೆಳಿಗ್ಗೆ 08-30 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. MRS ಸ್ವೀಕರಣಾ ಕೇಂದ್ರ ಶಿವಮೊಗ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ 25/01/24 ರಂದು ಬೆಳಿಗ್ಗೆ 08-30 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗುವುದು ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ….

Read More