ಕತ್ತು ಹಿಸುಕಿ ಯುವಕನ ಕೊಲೆ – ತಂಗಿಯ ಗಂಡನಿಂದಲೇ ಸುಪಾರಿ : ಮೂವರು ಸೆರೆ
ಶಿವಮೊಗ್ಗ : ಭಧ್ರಾವತಿ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಬಳಿಯ ಓರ್ವನನ್ನು ಕೊಲೆ ಮಾಡಿ ಖಾಲಿ ಜಾಗದಲ್ಲಿ ಎಸೆದುಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ತಾಳಯೆಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ.
ನಿರ್ಜನ ಪ್ರದೇಶದಲ್ಲಿ ಸಿಕ್ಕ ಮೃತದೇಹವನ್ನು ಮೈದೊಳಲು ಮಲ್ಲಾಪುರದ ನಿವಾಸಿ ಪರುಶುರಾಮ್ ಎಂದು ಗುರುತಿಸಲಾಗಿದೆ.
ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.
ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು.
ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಎಸೆದಿರುವುದನ್ನು ಗಮನಿಸಿದ ಸ್ಥಳೀಯ ರೈತರಿಗೆ ಮೃತದೇಹ ಕಾಣಿಸಿದೆ. ಜೊತೆಗೆ ಕೊಳೆತ ವಾಸನೆಯ ಬರುತ್ತಿತ್ತು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.