RIPPONPETE | ಅಂಗನವಾಡಿಗೆ ಬೀಗ ಜಡಿದ ಖಾಸಗಿ ವ್ಯಕ್ತಿಗಳು
ರಿಪ್ಪನ್‌ಪೇಟೆ – ಇಲ್ಲೊನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರಗೋಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಅಂಗನವಾಡಿಗೆ ಬೀಗ ಹಾಕಿರುವ ಘಟನೆ ನಡೆದಿದೆ.
ಕಾರಗೋಡು ಗ್ರಾಮದಲ್ಲಿರುವ ಅಂಗನವಾಡಿಗೆ ಅದೇ ಗ್ರಾಮದ ನಿವಾಸಿ ನೇತ್ರಾವತಿ ಎಂಬುವವರು ಈ ಜಾಗ ನಮ್ಮಾ ಖಾತೆಯದ್ದು ಎಂದು ಖ್ಯಾತೆ ತೆಗೆದು ಕಳೆದ ಮೂರು ದಿನಗಳಿಂದ ಬೀಗ ಜಡಿದಿದ್ದಾರೆ.ಇದರಿಂದ ಅಂಗನವಾಡಿ ಮಕ್ಕಳು ಕಳೆದೆರಡು ದಿನಗಳಿಂದ ಅಂಗನವಾಡಿಗೆ ಬಂದು ವಾಪಾಸ್ಸು ತೆರಳುತ್ತಿರುವ ಘಟನೆ ನಡೆದಿದೆ.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಅಕ್ಕಮಹಾದೇವಿ ರವರು ಹೆದ್ದಾರಿಪುರ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ….
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
