RIPPONPETE | ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ – ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ರಿಪ್ಪನ್‌ಪೇಟೆ : ರಾಜ್ಯದಲ್ಲಿ ಮೂರು ವಿಧಾನಸಭೆಯ ಉಪಚುನಾವಣೆಗೆ ಮತದಾನ ನಡೆದು ಇಂದು ಮತಎಣಿಕೆ ಮೂಲಕ ಫಲಿತಾಂಶ ಹೊರಬೀಳುತ್ತಿದ್ದಂತೆ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ನಡುವೆ ತೀವ್ರ ಹಣಾಹಣಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಗೆಲುವಿನ ಘೋಷಣೆಯಾಗುತಿದ್ದಂತೆ ಪಟ್ಟಣದ ವಿನಾಯಕ ಸರ್ಕಲ್ ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಚಿ ಸಂಭ್ರಮಿಸಿ ಸಿದ್ದರಾಮಯ್ಯ , ಡಿ ಕೆ ಶಿವಕುಮಾರ್ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಪರ ಜೈಕಾರ ಹಾಕಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ , ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ,ಕೆಡಿಪಿ ಸಮಿತಿ ಸದಸ್ಯರಾದ ಚಂದ್ರೇಶ್, ಆಸೀಫ಼್ ಭಾಷಾ , ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಮುಖಂಡರಾದ ಪರಮೇಶ್ , ಮಧುಸೂಧನ್ , ನಿರುಪಮಾ ರಾಕೇಶ್ ,ನೇಮಣ್ಣ ಬಂಡಿ, ಪ್ರಕಾಶ್ ಪಾಲೇಕರ್ , ಗಣಪತಿ , ಫ್ಯಾನ್ಸಿ ರಮೇಶ್ , ಶ್ರೀಧರ್ ವಿಗುರು , ವಿಜಯ್ ಮಳವಳ್ಳಿ , ಮೈದೀನ್ ಆರ್ ಹೆಚ್ ಹಾಗೂ ಇನ್ನಿತರರಿದ್ದರು.